ಶೀನಾ ಹತ್ಯೆ ಪ್ರಕರಣ: ಸಿದ್ಧಾರ್ಥ್ ದಾಸ್ ಡಿಎನ್​ಎ ಟೆಸ್ಟ್

ಶನಿವಾರ, 5 ಸೆಪ್ಟಂಬರ್ 2015 (09:40 IST)
ದಿನದಿನಕ್ಕೂ ಕುತೂಹಲ ಕೆರಳಿಸುತ್ತಿರುವ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಶುಕ್ರವಾರ ಶೀನಾಳ ಜೈವಿಕ ತಂದೆ ಎಂದು ಹೇಳಿಕೊಂಡಿರುವ ಸಿದ್ಧಾರ್ಥ್ ದಾಸ್​ರ ಡಿಎನ್​ಎ ಪರೀಕ್ಷೆಯನ್ನೂ ಶುಕ್ರವಾರ ನಡೆಸಲಾಯಿತು.
 
ಕೋಲ್ಕತ ಮೂಲದ ದಾಸ್ ತಾನು ಶೀನಾ ಮತ್ತು ಮಿಖೈಲ್ ಅವರ ನಿಜವಾದ ತಂದೆ. ಇಂದ್ರಾಣಿಯೊಂದಿಗೆ ನಾನು ಲಿವ್ ಇನ್ ಸಂಬಂಧವಿಟ್ಟುಕೊಂಡಿದ್ದೆ. ಅದರ ಪರಿಣಾಮ ಮಕ್ಕಳಿಬ್ಬರು ಜನಿಸಿದ್ದರು. ಆದರೆ ಭೋಗದ ಜೀವನವನ್ನು ಬಯಸಿದ್ದ ಇಂದ್ರಾಣಿ 1989ರಲ್ಲಿ ನನ್ನನ್ನು ತೊರೆದು ಹೋಗಿದ್ದಳು. ನಾನು ಶೀನಾ ತಂದೆ ಎಂಬುದನ್ನು ಸಾಬೀತು ಪಡಿಸಲು ಡಿಎನ್ಎ ಪರೀಕ್ಷೆಗೂ ಸಿದ್ಧ ಎಂದು ಮೂರು ದಿನಗಳ ಹಿಂದೆ ಮಾಧ್ಯಮದವರ ಬಳಿ ಬಳಿ ಹೇಳಿಕೊಂಡಿದ್ದರು. ಇದರ ಸತ್ಯಾಸತ್ಯತೆಯನ್ನು  ತಿಳಿಯಲು ಪೊಲೀಸರು ನಿನ್ನೆ ದಾಸ್ ಡಿಎನ್ಎ ಪರೀಕ್ಷೆಯನ್ನು ನಡೆಸಿದ್ದಾರೆ. 
 
ನಿನ್ನೆ ಸಹ ಪೊಲೀಸರು ಇಂದ್ರಾಣಿ ಪತಿ ಪೀಟರ್ ಮುಖರ್ಜಿಯ ವಿಚಾರಣೆ ನಡೆಸಿದರು.

ವೆಬ್ದುನಿಯಾವನ್ನು ಓದಿ