ಸಿದ್ದು ಸರ್ಕಾರದಿಂದ ಜನಪ್ರತಿನಿಧಿಗಳಿಗೆ ಬಂಪರ್ ಆಫರ್

ಶನಿವಾರ, 31 ಜನವರಿ 2015 (11:18 IST)
ಫೆ.3ರಂದು ಜಂಟಿ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರವು 1856ರ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಅನುಮೋದನೆ ಪಡೆದು ಪರಿಷ್ಕರಿಸಲಾಗುವುದು ಎನ್ನಲಾಗಿದೆ.  

ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸದಸ್ಯರಿಂದ ಬೇಡಿಕೆ ಬಂದಿದ್ದು, ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ ಕಾಯಿದೆಗೆ ಫೆ.3ರಂದು ನಡೆಯಲಿರುವ ದ್ವಿ ಸದನ ಅದಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಹಾಗಾಗಿ ಕಾಯಿದೆಗೆ ಶೀಘ್ರದಲ್ಲಿಯೇ ತಿದ್ದುಪಡಿ ತಂದು ವೇತನ ಹಾಗೂ ಭತ್ಯೆಯನ್ನು ಪರಿಷ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.

ತಿದ್ದುಪಡಿ ತಂದಲ್ಲಿ ಜನಪ್ರತಿನಿಧಿಗಳ ವೇತನ 30ರಿಂದ 40 ಸಾವಿರದ ವರೆಗೆ ಹೆಚ್ಚಳವಾಗಲಿದೆ ಎನ್ನಲಾಗಿದೆ.

ಜನಪ್ರತಿನಿಧಿಗಳು ಪ್ರಸ್ತುತ ಪಡೆಯುತ್ತಿರುವ ವೇತನ ಪಟ್ಟಿ:
ಮುಖ್ಯಮಂತ್ರಿ ಸಿದ್ದರಾಮಯ್ಯ 1,44,433
ಸಂಪುಟ ದರ್ಜೆ ಸಚಿವರ ವೇತನ-143,433,
ರಾಜ್ಯ ದರ್ಜೆ ಸಚಿವರ ವೇತನ-1,30,430
ಶಾಸಕರ ವೇತನ-60000

ಈ ಮೇಲಿನ ಪಟ್ಟಿಯಲ್ಲಿನ ವೇತನ ಒಟ್ಟು ವೇತನವಾಗಿದ್ದು, ಮನೆ, ಸಹಾಯಕರ, ಸಭೆ ಹಾಗೂ ಓಡಾಟ ಭತ್ಯೆ ಸೇರಿದಂತೆ ಇನ್ನಿತರೆಗಳು ಒಳಗೊಂಡಿದೆ. ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ತೆರಳಿ ಸಮಸ್ಯೆಗಳನ್ನು ಆಲಿಸಲು ಮಾಸಿಕವಾಗಿ 25000 ರೂ. ಹಾಗೂ ಅಧಿವೇಶನ ಹಾಗೂ ಸಭೆಯಲ್ಲಿ ಪಾಲ್ಗೊಂಡರೆ ದಿನಕ್ಕೆ ಒಂದು ಸಾವಿರ ನೀಡಲಾಗುತ್ತದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪವ ಅವರ ಸರ್ಕಾರದಲ್ಲಿ ಶಾಸಕರಿಗೆ ಇದ್ದ 12000 ಮೂಲ ವೇತನವನ್ನು 3000ಕ್ಕೆ ಏರಿಕೆ ಮಾಡಲಾಗಿತ್ತು. ಈಗ ಸಿದ್ದರಾಮಯ್ಯ ಸರ್ಕಾರ ಮತ್ತೆ ಮೂವತ್ತು ಸಾವಿರ ಏರಿಕೆ ಮಾಡಲಿದ್ದು, ಶಾಸಕರ ಒಟ್ಟು ವೇತನ ಒಂದು ಲಕ್ಷಕ್ಕೆ ಏರಿಕೆಯಾಗಲಿದೆ. ಸರ್ಕಾರದ ಈ ನಿರ್ಧಾರದಿಂದ ಸರ್ಕಾರಕ್ಕೆ ಪ್ರತೀ ತಿಂಗಳು 12 ಕೋಟಿ ಹೊರೆ ಬೀಳಲಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ