ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ: ಯೂ-ಟರ್ನ್ ಹೊಡೆದ ನವಜೋತ್ ಸಿಂಗ್ ಸಿದ್ಧು

ಬುಧವಾರ, 21 ಸೆಪ್ಟಂಬರ್ 2016 (17:27 IST)
ಅಧಿಕಾರ ವಿರೋಧಿ ಮತಗಳನ್ನು ವಿಭಜಿಸದಂತಾಗುವುದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ ಎಂದು ಮಾಜಿ ಬಿಜೆಪಿ ಸಂಸದ ನವಜೋತ್ ಸಿಂಗ್ ಸಿದ್ದು ಘೋಷಿಸಿದ್ದಾರೆ. 
ಅವಾಜ್ -ಎ- ಪಂಜಾಬ್ ಪಕ್ಷ ಸ್ಥಾಪಿಸಿದ ಕೆಲವೇ ದಿನಗಳ ನಂತರ ಸಿದ್ದು ಯೂ-ಟರ್ನ್ ಹೊಡೆದಿರುವುದು ಕೆಲ ಪಕ್ಷಗಳಿಗೆ ವರದಾನವಾಗಿದ್ದರೆ, ಕೆಲ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
 
ಮುಂದಿನ ಚುನಾವಣೆಯೊಳಗೆ ಹೊಸ ರಾಜಕೀಯ ಪಕ್ಷದೊಂದಿಗೆ ಸಿದ್ದತೆ ನಡೆಸುವುದು ಕಷ್ಟಕರವಾದ ಸಂಗತಿಯಾಗಿದೆ. ಪಂಜಾಬ್ ರಾಜ್ಯದ ಉತ್ತಮ ಭವಿಷ್ಯಕ್ಕಾಗಿ ಮೈತ್ರಿಗೆ ಸಿದ್ದ ಎಂದು ತಿಳಿಸಿದ್ದಾರೆ.
 
ಆವಾಜ್ -ಎ-ಪಂಜಾಬ್ ವೇದಿಕೆ ರಾಜಕಿಯೇತರ ವೇದಿಕೆಯಾಗಿದ್ದು, ಪಂಜಾಬ್ ರಾಜ್ಯದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ಪಂಜಾಬಿ ಕೂಡಾ ವೇದಿಕೆಯ ಸದಸ್ಯರಾಗಿರುತ್ತಾರೆ ಎಂದರು.
 
ಕಳೆದ 15 ವರ್ಷಗಳಿಂದ ಪಂಜಾಬ್ ರಾಜ್ಯ ಬಾದಲ್ ಮತ್ತು ಅಮರಿಂದರ್ ಅವರ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗಿಹೋಗಿದೆ. ಇದೀಗ ಕಳೆದು ಹೋದ 15 ವರ್ಷಗಳನ್ನು ಮರೆತು ಬಾದಲ್-ಬಿಜೆಪಿ ಸರಕಾರವನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ಬಿಜೆಪಿ ಮಾಜಿ ಸಂಸದ ನವಜೋತ್ ಸಿಂಗ್ ಸಿದ್ದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ