ಆಕೆಯ ಫೇಸ್‌ಬುಕ್‌ ಗೆಳೆಯ ಲೂಟಿ ಮಾಡಿದ್ದು ಬರೊಬ್ಬರಿ 1.95 ಲಕ್ಷ ರೂ!

ಬುಧವಾರ, 23 ಏಪ್ರಿಲ್ 2014 (17:20 IST)
ಪಶ್ಚಿಮ ಸಿಕ್ಕಿಂ ಮೂಲದ ಮಹಿಳೆಯೊಬ್ಬಳಿಂದ ಆಕೆಯ ಫೇಸ್‌ಬು ಕ್ ಸ್ನೇಹಿತ 1.95 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ್ದಾನೆ. ಯುಕೆ ಮೂಲದ ಆತನ ಜತೆ ಕಳೆದ ಏಪ್ರಿಲ್ 2ರಿಂದ ಗೆಳೆತನವನ್ನು ಪ್ರಾರಂಭಿಸಿದ್ದ ಆಕೆ  20 ದಿನಗಳ ಅವಧಿಯಲ್ಲಿ ಭಾರಿ ಮೊತ್ತದ ಹಣವನ್ನು ಕಳೆದುಕೊಂಡಿದ್ದಾಳೆ. 
ಸೃಜನಾ ರೈ( ಹೆಸರು ಬದಲಾಯಿಸಲಾಗಿದೆ) ಯುಕೆ ವಾಸಿ ಎಂದು ಹೇಳಿಕೊಂಡ ವಿಲಿಯಂ ಜಾಕ್ಸನ್ ಎಂಬುವನ ಜತೆ ಇದೇ ತಿಂಗಳ 2 ರಂದು ಸ್ನೇಹವನ್ನು ಬೆಳೆಸಿಕೊಂಡು ಚಾಟ್ ಮಾಡಲು ಆರಂಭಿಸಿದ್ದಳು. ಕೆಲವು ಗ್ಯಾಜೆಟ್‌ಗಳನ್ನು ಮತ್ತು ಹಣವನ್ನು ಕಳುಹಿಸುವ ನೆಪ ಹೇಳಿ ಆತ ಆಕೆಯ ಅಂಚೆ ವಿಳಾಸವನ್ನು ಕೇಳಿದ. 70,000 ಪೌಂಡ್ಸ್ ಮತ್ತು ಗ್ಯಾಜೆಟ್‌ಗಳನ್ನು ಕಳುಹಿಸುತ್ತೇನೆ ಜಾಗತಿಕ ವಿತರಣಾ ಮತ್ತು ಕಸ್ಟಮ್ ಸೇವೆ ವೆಚ್ಚವಾಗಿ ಸ್ವಲ್ಪ ಹಣವನ್ನು ಠೇವಣಿ ಮಾಡುವಂತೆ ಆತ ಹೇಳಿದ.

ಆ ನಂತರ ಆಕೆಯಲ್ಲಿ  ಠೇವಣಿ ಮೊತ್ತ 1.95 ಲಕ್ಷ ರೂಪಾಯಿಗಳನ್ನು,ಪ್ರತ್ಯೇಕ ದಿನಾಂಕಗಳಂದು ಕಂತುಗಳಲ್ಲಿ ಕಳುಹಿಸುವಂತೆ ಸಲಹೆ ನೀಡಲಾಯಿತು. ರೈ ಮೂರು ಕಂತುಗಳಲ್ಲಿ ಕ್ರಮವಾಗಿ ರೂ 25,000, ರೂ 60, 000 ಮತ್ತು ರೂ 1.10 ಲಕ್ಷವನ್ನು, 'ಅಂತಾರಾಷ್ಟ್ರೀಯ ಕೊರಿಯರ್, ಭಯೋತ್ಪಾದನಾ ವಿರೋಧಿ ಮತ್ತು ಹಣ ನೋಂದಣಿ' ಶುಲ್ಕಗಳಾಗಿ  ಭಾರತೀಯ ಹಣಕಾಸು ಸಚಿವಾಲಯ ಅಡಿಯಲ್ಲಿ  ಎಸ್‌ಬಿಐ ಮೂಲಕ ಪಾವತಿಸಿದಳು. 
 
ಮೂರು ಬಾರಿ ಕಂತಿನಲ್ಲಿ ಹಣ ಕಟ್ಟಿದ್ದ ಆಕೆ ನಾಲ್ಕನೇ ಬಾರಿ ಕಟ್ಟುವಾಗ ಅವರು ತನಗೆ ಮೋಸ ಮಾಡುತ್ತಿರಬಹುದು ಎಂದು ಸಂಶಯ ತಾಳಿ ತನ್ನ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಳು. ತನ್ನ ಖಾತೆಯಲ್ಲಿನ ಹಣ ಕಡಿತವಾಗಿರುವುದು ಖಚಿತವಾದಾಗ ಆಕೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಆನಂತರ ಆಕೆ ಯುಕೆಯಿಂದ ದೂರವಾಣಿ ಕರೆ ಬರುವುದು ನಿಂತು ಹೋಯಿತು.  
 
ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ನಗದು ವ್ಯವಹಾರ ನಡೆಸಲಾದ ಎಲ್ಲಾ ಒಂಬತ್ತು ಎಸ್‌ಬಿಐ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಬ್ಯಾಂಕ್‌ ಅಧಿಕಾರಿಗಳಿಗೆ 
ತಿಳಿಸಿದ್ದಾರೆ.ಖಾತೆದಾರರ, ಮತ್ತು ಗ್ರಾಹಕರ ಮೊಬೈಲ್ ಫೋನ್ ವಿವರಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ