ದಲಿತ ವಿರೋಧಿ ಹೇಳಿಕೆ: ಸ್ಮೃತಿ ಇರಾನಿಗೆ ಬಿಜೆಪಿ ಹೈಕಮಾಂಡ್ ವಾರ್ನಿಂಗ್

ಭಾನುವಾರ, 28 ಫೆಬ್ರವರಿ 2016 (18:08 IST)
ಸಂಸತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿ ಕೋಲಾಹಲಕ್ಕೆ ಕಾರಣರಾಗಿದ್ದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿಗೆ ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮಾಧ್ಯಮಗಳ ವರದಿಗಳ ಪ್ರಕಾರ. ರಾಜ್ಯಸಭೆಯಲ್ಲಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಚರ್ಚೆಯ ಸಂದರ್ಭದಲ್ಲಿ ದಲಿತರ ಭಾವನೆಗಳಿಗೆ ತರುವ ರೀತಿಯಲ್ಲಿ ಸಚಿವೆ ಸ್ಮೃತಿ ಇರಾನಿ ಹೇಳಿಕೆ ನೀಡಿರುವುದು ಬಿಜೆಪಿಯಲ್ಲಿರುವ ಓಬಿಸಿ ಜಾತಿಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ  
 
ಸಚಿವೆ ಇರಾನಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಮಧ್ಯೆ ಪ್ರವೇಶಿಸಿ ನಿಭಾಯಿಸುವಂತೆ ಕೂಡಾ ಹೈಕಮಾಂಡ್ ಸೂಚನೆ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
 
ಸಚಿವೆ ಸ್ಮೃತಿ ಇರಾನಿ ಮಹಿಷಾಸುರ ಮರ್ದನಿ ಮತ್ತು ದುರ್ಗಾ ಮಾತೆಯ ವಿಷಯದ ಕುರಿತಂತೆ ಮಾತನಾಡುವಾಗ ಬಿಜೆಪಿಯ ಓಬಿಸಿ ಸಂಸದರು ತೀವ್ರವಾಗಿ ವಿರೋಧಿಸಿ, ಹೈಕಮಾಂಡ್‌ಗೆ ದೂರು ನೀಡಿದ್ದರು. 
 
ಇವತ್ತಿಗೂ ಕೆಲ ಸಮುದಾಯಗಳಲ್ಲಿ ಮಹಿಷಾಸುರನನ್ನು ರಾಕ್ಷಸ ಎಂದು ಒಪ್ಪುವುದಿಲ್ಲ. ಬದಲಿಗೆ ಮಹಿಷಾಸುರನನ್ನು ಪೂಜಿಸಲಾಗುತ್ತಿದೆ. ಆದರೆ, ಮಹಿಷಾಸುರನ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿರುವುದು ಬಿಜೆಪಿಯಲ್ಲಿಯೇ ಅಪಸ್ವರ ಮೂಡಿಸಿದೆ. 
 

ವೆಬ್ದುನಿಯಾವನ್ನು ಓದಿ