ಮಾದಕ ವಸ್ತು ಸಾಗಾಟ ಹಗರಣ: ಮಜೀತಿಯಾಗೆ ನೋಟಿಸ್

ಸೋಮವಾರ, 22 ಡಿಸೆಂಬರ್ 2014 (11:29 IST)
ಮಾದಕ ವಸ್ತು ಸಾಗಾಟ ಜಾಲದಲ್ಲಿ ಸಚಿವರ ಕೈವಾಡವಿದೆ ಎಂಬ ಆರೋಪದ ಮೇರೆಗೆ ಪಂಜಾಬ್ ಸರ್ಕಾರದಲ್ಲಿ ಪ್ರಸ್ತುತ ಕಂದಾಯ ಸಚಿವರಾಗಿರುವ ಬಿಕ್ರಮ ಸಿಂಗ್ ಮಜೀತಿಯಾ ಅವರಿಗೆ ಕೇಂದ್ರದ ಜಾರಿ ನಿರ್ದೇಶನಾಲಯ ಇಂದು ನೋಟಿಸ್ ಜಾರಿ ಮಾಡಿದೆ.
 
ಹಗರಣದ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶನಾಲಯದ ಅಧಿಕಾರಿಗಳು, ಮಾದಕ ವಸ್ತು ಸಾಗಾಟ ಹಗರಣದಲ್ಲಿ ಮಜೀತಿಯಾ ವಿರುದ್ಧವೂ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ನೋಟಾಸ್ ಜಾರಿ ಮಾಡಲಾಗಿದ್ದು, ಈ ಹಗರಣವು 2007ರಿಂದ ಇಲ್ಲಿಯವರೆಗೂ ಕೂಡ ಚಾಲ್ತಿಯಲ್ಲಿತ್ತು. ಅಲ್ಲದೆ ಹಗರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕಾರಣ ಸಾಕಷ್ಟು ಅವ್ಯವಹಾರ ನಡೆದಿದ್ದು, ಇದರಿಂದ ಸರ್ಕಾರಕ್ಕೆ ಸುಮಾರು 6000 ಕೋಟಿಗೂ ಅಧಿಕವಾಗಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  
 
ಇನ್ನು ಮಜೀತಿಯಾ, ಪಂಜಾಬ್ ಸರ್ಕಾರ ಉಪ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಸೋದರ ಸಂಬಂಧಿ ಎನ್ನಲಾಗಿದ್ದು, ಪ್ರಕರಣದಿಂದ ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳದ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ ಎನ್ನಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಮಾಜಿ ಪೊಲೀಸ್ ಅಧಿಕಾರಿಯೋರ್ವನನ್ನು ಬಂಧಿಸಲಾಗಿತ್ತು.  

ವೆಬ್ದುನಿಯಾವನ್ನು ಓದಿ