37 ಯುವತಿಯರ ಅತ್ಯಾಚಾರ ಎಸಗಿದ್ದ ಸ್ನೇಕ್ ಗ್ಯಾಂಗ್‌ ಅಪರಾಧ ಸಾಬೀತು

ಬುಧವಾರ, 11 ಮೇ 2016 (16:03 IST)
ಹಾವುಗಳನ್ನು ತೋರಿಸಿ ಯುವತಿಯರನ್ನು ಬೆದರಿಸಿ ಅತ್ಯಾಚಾರ ಎಸಗುತ್ತಿದ್ದ ಅಪಾಯಕಾರಿ ಗ್ಯಾಂಗ್‌ ಎಂಟು ಜನ ಸದಸ್ಯರು ತಪ್ಪಿತಸ್ಥರು ಎಂದು ಹೈದರಾಬಾದ್ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ.

ಕೋರ್ಟ್ ತೀರ್ಪು ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ಪೀಡಿತರ ಸಂಬಂಧಿಗಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
 
 
 
ಒಂಟಿ ಮಹಿಳೆಯರನ್ನು ಬೆದರಿಸಿ, ಹಲ್ಲೆ ನಡೆಸುತ್ತಿದ್ದ ತಂಡ  ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗುತ್ತಿತ್ತು ಎಂದು ತಿಳಿದು ಬಂದಿದೆ. ಒಟ್ಟು 37 ಮಹಿಳೆಯರ ಮೇಲೆ ಇವರು ಕೀಚಕನವನ್ನು ಮೆರೆದಿದ್ದಾರೆ ಎಂದು ತಿಳಿದು ಬಂದಿದೆ. 
 
2014ರಲ್ಲಿ ಇಬ್ಬರು ಪ್ರೇಮಿಗಳ ಮೇಲೆ ಹಲ್ಲೆ ನಡೆಸಿದ್ದ ತಂಡ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿತ್ತು. ಹೀಗಾಗಿ ಪ್ರಕರಣ ಬೆಳಕಿಗೆ ಬಂದಿತ್ತು.  ಆ ಬಳಿಕ ಅವರನ್ನು ಹಿಡಿದು ವಿಚಾರಣೆ ಮಾಡಲಾಗಿ ಒಂದೊಂದೇ ಪ್ರಕರಣಗಳ ಬಗ್ಗೆ ಬಾಯ್ಬಿಟ್ಟಿದ್ದರು. 

ವೆಬ್ದುನಿಯಾವನ್ನು ಓದಿ