ಹಾವು ತನ್ನ ಸೇಡು ತೀರಿಸಿಕೊಂಡಿತೆ? ಇದೊಂದು ಅಚ್ಚರಿಯ ಕಥೆ !

ಮಂಗಳವಾರ, 26 ಆಗಸ್ಟ್ 2014 (19:23 IST)
ರಾಜಸ್ಥಾನದ ಸಿರೋಹಿ ಜಿಲ್ಲೆಯ ಆಂಬೆಶ್ವರ್ಜಿಯಲ್ಲಿ ನಡೆಯುತ್ತಿರುವ ಎನ್‌‌ಸಿಸಿ ಶಿಬಿರದಲ್ಲಿ ತಡ ರಾತ್ರಿ ಮತ್ತೊಂದು ಬಾರಿ ಹಾವು ಕಚ್ಚಿದ ದುರ್ಘಟನೆ ವರದಿಯಾಗಿದೆ. 
 
ಶಿಬಿರದಲ್ಲಿ ಆಕಸ್ಮಿಕವಾಗಿ ನಾಲ್ಕು ಎನ್‌‌ಸಿಸಿ ಶಿಬಿರಾರ್ಥಿಗಳ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಇದರಲ್ಲಿ ಇಬ್ಬರ ಚಿಕಿತ್ಸೆಗಾಗಿ ಪಾಲಿಗೆ ಕಳುಹಿಸಲಾಗಿದೆ.
 
ಪಾಲಿಯ ಆಸ್ಪತ್ರೆಯಲ್ಲಿ ದಾಖಲಾದ ಇಬ್ಬರು ಶಿಬಿರಾರ್ಥಿಗಳಲ್ಲಿ ಒಬ್ಬನ ತನಿಖೆಯಲ್ಲಿ, ಇವರಿಗೆ ಹಾವು ಕಚ್ಚಿದೆ ಎಂದು ಗೊತ್ತಾಗಿದೆ. ಇನ್ನುಳಿದ ಇಬ್ಬರು ಹುಡುಗರನ್ನು ಸಿರೋಹಿಯಲ್ಲಿ ಭರ್ತಿ ಮಾಡಲಾಗಿದೆ. ಈ ಇಬ್ಬರು ಹಾವನ್ನು ನೋಡಿದ ತಕ್ಷಣ ಹೆದರಿ ಕಂಗಾಲಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. 
 
ಮೊದಲ ಘಟನೆಯಲ್ಲಿ ಹಾವು ಕಡಿದಿದ್ದರಿಂದ ವಿಧ್ಯಾರ್ಥಿಗಳು ಸಾವನ್ನಪ್ಪಿದ ಸ್ಥಳದಲ್ಲಿ ಒಂದು ಸತ್ತು ಹೋದ ಹಾವು ಸಿಕ್ಕಿತ್ತು. ಈ ಹಾವನ್ನು ಯಾರೊ ಒಬ್ಬ ವಿಧ್ಯಾರ್ಥಿ ಸಾಯಿಸಿದ್ದರಿಂದಲೇ ಅದರ ಸೇಡು ಹಾವು ತೀರಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. 
 
ಶುಕ್ರವಾರ ಇದೇ ಶಿಬಿರದಲ್ಲಿ ಜ್ಯೂನಿಯರ್‌ ವಿಭಾಗದ ಅರ್ಜುನ್ ಮತ್ತು ಮುಕೇಶ್‌‌ ಕುಮಾರ ಹಾವು ಕಚ್ಚಿದ್ದರಿಂದ ಸಾವನ್ನಪ್ಪಿದ್ದರು. ಇದೇ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಹಾವು ಕಚ್ಚಿತ್ತು. ಹಾವು ಕಚ್ಚಿದ ಸ್ಥಳದಲ್ಲಿಯೇ ಮೃತ ಹಾವೊಂದು ಪತ್ತೆಯಾಗಿತ್ತು.
 
ಆಂಬೇಶ್ವರ್‌ಜಿಯಲ್ಲಿ  ನಡೆಯುತ್ತಿರುವ ಎನ್‌‌ಸಿಸಿ ಶಿಬಿರದಲ್ಲಿ ಇಬ್ಬರು ಶಿಬಿರಾರ್ಥಿಗಳು ಸಾವನ್ನಪ್ಪಿದ ಹಿನ್ನಲೆಯಲ್ಲಿ ರಕ್ಷಣಾ ಇಲಾಖೆ ಕೂಡ ತನಿಖೆ ನಡೆಸುವುದು. ತನಿಖಾ ತಂಡದಲ್ಲಿ ಒಬ್ಬ ಜನರಲ್‌‌ ಶ್ರೇಣಿಯ ಅಧಿಕಾರಿ, ಇಬ್ಬರು ಬ್ರಿಗೆಡಿಯರ್‌ ಮತ್ತು ಒಬ್ಬ ಕರ್ನಲ್‌ ಶ್ರೇಣಿಯ ಅಧಿಕಾರಿ ಭಾಗಿಯಾಗಿರಲಿದ್ದಾರೆ ಎಂದು ನಾಲ್ಕು ರಾಜ್ಯದ ಐ ಎನ್‌‌ಸಿಸಿ ಕಮಾಂಡಿಂಗ್‌ ಆಫೀಸರ್‌‌‌ ವಿಶ್ವಜೀತ್‌ ಸಿಂಗ್‌ ತಿಳಿಸಿದ್ದಾರೆ. 
 
ಈ ಅಧಿಕಾರಿ ಶನಿವಾರ ಸಂಜೆ ಆಂಬೇಶ್ವರ್‌ಜಿ ಶಿಬಿರಕ್ಕೆ ಭೇಟಿ ನೀಡಿದ್ದರು. ಈ ತನಿಖಾ ತಂಡ ಅಲ್ಲಿಯ ಸ್ಥಿತಿ, ಶಿಬಿರದ ಸ್ಥಳ ಮತ್ತು ಇತರ ವಿಷಯಗಳನ್ನು ಕುರಿತು ತನಿಖೆ ನಡೆಸಿ, ವರದಿಯನ್ನು ರಕ್ಷಣಾ ಸಚಿವಾಲಯಕ್ಕೆ ಕಳುಹಿಸುವುದಾಗಿ ಸಿಂಗ್‌ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ