1999ರ ಮೃದು ಬಿಜೆಪಿ ಸರಕಾರದಿಂದ ಭಯೋತ್ಪಾದನೆಗೆ ಅಡಿಗಲ್ಲು: ಕಾಂಗ್ರೆಸ್ ಆರೋಪ

ಶುಕ್ರವಾರ, 3 ಜುಲೈ 2015 (19:51 IST)
ಇಂಡಿಯನ್ ಏರ್‌ಲೈನ್ಸ್ ಹೈಜಾಕ್ ಮಾಡಿದ ಸಂದರ್ಭದಲ್ಲಿ ಮೂವರು ಉಗ್ರರನ್ನು ಬಿಡುಗಡೆ ಮಾಡಿದ್ದ 1999ರಲ್ಲಿದ್ದ ಬಿಜೆಪಿಯ ಮೃದು ಸರಕಾರ, ಭಯೋತ್ಪಾದನೆಯ ಶಂಕುಸ್ಥಾಪನೆಗೆ ಅಡಿಗಲ್ಲು ಹಾಕಿತು ಎಂದು ಕಾಂಗ್ರೆಸ್ ಆರೋಪಿಸಿದೆ.  
 
ಬಿಜೆಪಿ ನೇತೃತ್ವದ ಮೃದು ಸರಕಾರ ಅಧಿಕಾರದಲ್ಲಿದ್ದಾಗ ಮೂವರು ಉಗ್ರರನ್ನು ಬಿಡುಗಡೆ ಮಾಡಿದ ನಂತರ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಭಯೋತ್ಪಾದನೆಗೆ ಶಂಕುಸ್ಥಾಪನೆ ನೆರವೇರಿಸಿದಂತಾಯಿತು ಎಂದು ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಹೇಳಿದ್ದಾರೆ. 
 
ಬಿಜೆಪಿ ಪಕ್ಷ ನಕಲಿ ಸುಳ್ಳು ರಾಷ್ಟ್ರೀಯತೆಯ ಮತ್ತು ಸುಳ್ಳು ದೇಶಭಕ್ತಿಯ ಮುಖವಾಡ ಹೊಂದಿದೆ. ಮೂವರು ಉಗ್ರರನ್ನು ಬಿಡುಗಡೆ ಮಾಡಿದ ಬಿಜೆಪಿ ಸರಕಾರ, ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಭಯೋತ್ಪಾದನೆ ಹರಡಲು ನೆರವಾದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಲಷ್ಕರ್ ಉಗ್ರರನ್ನು ಬಿಡುಗಡೆಗೊಳಿಸಿದ ನಂತರ ಸಂಸತ್ತಿನ ಮೇಲೆ ದಾಳಿ ಮತ್ತು ಮುಂಬೈ ದಾಳಿಗಳಂತಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎಂದರು. 
 
ದೇಶದ್ರೋಹಿಗಳಿಗೆ, ಭಯೋತ್ಪಾದಕರಿಗೆ ಮತ್ತು ಅಪರಾಧಿಗಳಿಗೆ ನೆರವು ನೀಡಿದ ಬಿಜೆಪಿ ಸರಕಾರ ಬೇಷರತ್ತಾಗಿ ದೇಶದ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಒತ್ತಾಯಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ