ರೈಲ್ವೆ ಬಜೆಟ್‌ನ ಕೆಲವು ಪ್ರಮುಖ ಮುಖ್ಯಾಂಶಗಳು ಕೆಳಗಿವೆ

ಮಂಗಳವಾರ, 8 ಜುಲೈ 2014 (19:28 IST)
ರೈಲ್ವೆ ಸಚಿವ ಸದಾನಂದ ಗೌಡ ಅವರು ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಸ್ವಚ್ಛತೆಗೆ ಆದ್ಯತೆ, ಶುಚಿಯಾದ ಆಹಾರ ಸೌಲಭ್ಯ, ರೈಲ್ವೆಗೆ ಹೈಟೆಕ್ ಸ್ಪರ್ಶ,  ಜನೋಪಯೋಗಿ ಯೋಜನೆಗಳನ್ನು ಪ್ರಕಟಿಸಿದ್ದಾರೆ. 
 ಸ್ವಚ್ಛತೆಗೆ ಆದ್ಯತೆ 
ಪ್ರಯಾಣಿಕ ಸ್ನೇಹಿಯೋಜನೆಗಳ ಅನುಷ್ಠಾನ
ಶುದ್ಧ ಕುಡಿಯುವ ನೀರು ಪೂರೈಕೆಗೆ ಆರ್‌ಒಗಳ ಅಳವಡಿಕೆ
ನಿಲ್ದಾಣಗಳಲ್ಲಿ ಸ್ವಚ್ಛತೆ ಪಾಲನೆ ಮೇಲೆ ನಿಗಾ ಇರಿಸಲು ಸಿಸಿಟಿವಿ
 
ಆಹಾರ ಸೌಲಭ್ಯ
ಎಲ್ಲಾ ನಿಲ್ದಾಣಗಳಲ್ಲಿ ಫುಡ್‌ಕೋರ್ಟ್‌ಗಳ ಸ್ಥಾಪನೆ
ಹಂತ, ಹಂತವಾಗಿ ಸಿದ್ದ ಆಹಾರ ಪೂರೈಕೆಗೆ ಕ್ರಮ
ಎಲ್ಲಾ ನಿಲ್ದಾಣಗಳಲ್ಲಿ ಆಹಾರ ಪೂರೈಕೆ ತಾಣ
ಎಸ್‌ಎಂಎಸ್ ಮೂಲಕ ಊಟ ತರಿಸುವ ವ್ಯವಸ್ಥೆ
 
ಹೈಟೆಕ್ ಸ್ಪರ್ಶ
ಗಾಲಿಗಳ ಮೇಲೆ ಕಚೇರಿ ವ್ಯವಸ್ಥೆಗೆ ಚಿಂತನೆ
ಆಯ್ದ ರೈಲುಗಳಲ್ಲಿ ಇಂಟರ್ನೆಟ್, ವರ್ಕ್‌ಸ್ಟೇಷನ್ ಸೌಲಭ್ಯ
ನಿಲ್ದಾಣಗಳಲ್ಲಿ ಡಿಜಿಟಲ್ ವೇಳಾಪಟ್ಟಿಗಳ ಅಳವಡಿಕೆಗೆ ಕ್ರಮ
 
 
ಜನೋಪಯೋಗಿ ಯೋಜನೆಗಳು
ಹಣ್ಣು-ತರಕಾರಿಗಳ ಸಾಗಣೆಗೆ ತಾಪಮಾನ ನಿಯಂತ್ರಿತ ಸ್ಟೋರೇಜ್
ಹಾಲಿನ ಸಾಗಣೆಗೆ ವಿಶೇಷ ರೈಲುಗಳು
ವೃದ್ಧರಿಗೆ ಬ್ಯಾಟರಿ ಚಾಲಿತ ರೈಲುಗಳು
ಆನ್‌ಲೈನ್‌ನಲ್ಲಿ ಪ್ಲಾಟ್‌ಫಾಂ ಟಿಕೆಟ್ ವ್ಯವಸ್ಥೆ
ಪ್ರಮುಖ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನ 
...............
ಹೈಸ್ಪೀಡ್ ರೈಲುಗಳು
ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್ ರೈಲು
45 ನಿಮಿಷಕ್ಕೆ ಮೈಸೂರು ತಲುಪಬಹುದು
ರಿಯಲ್ ಎಸ್ಟೇಟ್ ಉದ್ಯಮ ಅಭಿವೃದ್ಧಿಯಾಗಲಿದೆ
ಕಾರುಗಳ ಬಳಕೆ ಕಡಿಮೆಯಾಗಿ ವಾಹನ ದಟ್ಟಣೆ ಕಡಿಮೆ
ನೈಸ್ ಕಾರಿಡಾರ್ ಯೋಜನೆಗೆ ಹಿನ್ನಡೆ
...................
ಸಬರ್ಬನ್ ರೈಲು ಕೊಟ್ಟ ಡಿವಿಎಸ್
ಟಾಟಾನಗರ- ಬೈಯಪ್ಪನಹಳ್ಳಿ( 16 ಕಿಮೀ)
ಬೆಂಗಳೂರು-ನೆಲಮಂಗಲ ( 22 ಕಿಮೀ)
ಬೆಂಗಳೂರು- ರಾಮನಗರ (50 ಕಿಮೀ)
ಬೆಂಗಳೂರು- ಹೊಸೂರು (40 ಕಿಮೀ)

ವೆಬ್ದುನಿಯಾವನ್ನು ಓದಿ