ಕೆಲ ನ್ಯಾಯಾಂಗದ ಆದೇಶಗಳು ಅವಿವೇಕತನದ ಕೂಡಿರುತ್ತವೆ: ಮನೋಹರ್ ಪರಿಕ್ಕರ್

ಸೋಮವಾರ, 30 ಮೇ 2016 (21:08 IST)
ನ್ಯಾಯಾಂಗದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್, ನ್ಯಾಯಾಲಯದ ಕೆಲವೊಂದು ನಿರ್ದೇಶನಗಳು ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಅವಿವೇಕತನದಿಂದ ಕೂಡಿರುತ್ತೇವೆ ಎಂದು ಗುಡುಗಿದ್ದಾರೆ.
 
ನ್ಯಾಯಾಂಗದ ಅವಿವೇಕತನದ ನಿರ್ದೇಶನಗಳು ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಕೂಡಿರುತ್ತವೆ. ವೈಜ್ಞಾನಿಕತೆಯ ಅರಿವಿಲ್ಲದ ಕೆಲವರು ನ್ಯಾಯಾಂಗದ ನಿರ್ದೇಶನಗಳನ್ನು ಪಾಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
 
ನಾನು ಮರ್ಸಿಡೆಸ್ ಬೆಂಝ್ ಕಂಪೆನಿಯ ವರದಿಯನ್ನು ಓದುತ್ತಿದ್ದೆ.  ಭಾರತದ ನ್ಯಾಯಾಲಯದ ತೀರ್ಪುಗಳು ನಮ್ಮ ತಿಳುವಳಿಕೆಗೆ ನಿಲುಕುವುದಿಲ್ಲ. ಆದ್ದರಿಂದ ಭಾರತದಲ್ಲಿ ಹೂಡಿಕೆಯನ್ನು ನಿಲ್ಲಿಸಿದ್ದೇವೆ. ಡೀಸೆಲ್ ವಾಹನಗಳಿಗೆ ನಿಷೇಧ ಹೇರುವ ಲಾಜಿಕ್ ನಮಗೆ ಅರ್ಥವಾಗಿಲ್ಲ ಎಂದು ವರದಿಯಲ್ಲಿ ಪ್ರಕಟಿಸಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು. 
 
ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಕೋರ್ಟ್ ಡೀಸೆಲ್ ವಾಹನಗಳನ್ನು ನಿಷೇಧಿಸಿದೆ ಎನ್ನುವುದು ನಮಗೆ ಗೊತ್ತಿದೆ. ಆದರೆ, ಯಾವ ಡೀಸೆಲ್ ವಾಹನಗಳು ಮೌಲಿನ್ಯ ಉಂಟು ಮಾಡುವುದಿಲ್ಲವೋ ಅಥವಾ ಪೆಟ್ರೋಲ್ ವಾಹನಗಳಿಗಿಂತಲೂ ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆಯೋ ಅಂತಹ ವಾಹನಗಳಿಗೆ ನಿಷೇಧ ಹೇರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದಾಗಿದೆ ಎಂದು ತಿಳಿಸಿದ್ದಾರೆ.
 
ಕೆಲವೊಂದು ಬಾರಿ ಕೋರ್ಟ್ ತೀರ್ಪುಗಳನ್ನು ಪಾಲನೆ ಮಾಡುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ