ಕೆಲವರಿಗೆ ವಯಸ್ಸಾಗುತ್ತಿದ್ದರೂ ಪ್ರೌಢತೆಯಿರುವುದಿಲ್ಲ: ರಾಹುಲ್ ಗಾಂಧಿ ವಿರುದ್ಧ ಮೋದಿ ಲೇವಡಿ

ಗುರುವಾರ, 3 ಮಾರ್ಚ್ 2016 (16:34 IST)
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸುಮಾರು 30 ನಿಮಿಷಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಾರನೇ ದಿನವೇ ಪ್ರಧಾನಿ ಮೋದಿ, ಕೆಲವರಿಗೆ ವಯಸ್ಸಾಗಿದ್ದರೂ ಪ್ರೌಢರಾಗಿರುವುದಿಲ್ಲ ಎಂದು ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
  
ಸಂಸತ್ತಿನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣ ನಂತರ ಧನ್ಯವಾದಗಳನ್ನು ಅರ್ಪಿಸಿ ಮಾತನಾಡಿದ ಮೋದಿ, ಕೆಲವರಿಗೆ ಕೇವಲ ವಯಸ್ಸಾಗುತ್ತದೆ. ವಯಸ್ಸಿಗೆ ತಕ್ಕಂತೆ ಪ್ರೌಢತೆಯಿರುವುದಿಲ್ಲ ಎಂದು ಲೇವಡಿ ಮಾಡಿದರು.
 
ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕರಾಗಿದ್ದ ಜವಾಹರ ಲಾಲ್ ನೆಹರು ಮತ್ತು ರಾಜೀವ್ ಗಾಂಧಿಯವರ ಭಾಷಣಗಳನ್ನು ಉಲ್ಲೇಖಿಸಿದ ಮೋದಿ, ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವ ಬಗ್ಗೆ ವಿಪಕ್ಷಗಳಲ್ಲಿ ಪಾಠ ಕಲಿಯಬೇಕಾಗಿದೆ ಎಂದು ವ್ಯಂಗ್ಯವಾಡಿದರು.
 
ಕಲೆದ 2013ರಲ್ಲಿ ಎರಡು ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆಗೊಳಗಾದವರು ಚುನಾವಣೆಗೆ ಸ್ಪರ್ಧಿಸಲು ಅನರ್ಹತೆ ಹೊಂದುತ್ತಾರೆ ಎನ್ನುವ ವಿವಾದಾತ್ಮಕ ಸುಗ್ರಿವಾಜ್ಞೆ ಮಸೂದೆಯನ್ನು ಹರಿದ ಹಾಕಿದ ಕಾಂಗ್ರೆಸ್ ಮುಖಂಡರಿಗೆ ಪ್ರೌಢತೆಯಿಲ್ಲ ಎನ್ನುವುದು ಸಾಬೀತಾಗಿದೆ ಎಂದು ತಿರುಗೇಟು ನೀಡಿದರು. 
 
ಮುಂದುವರಿದು ವಾಗ್ದಾಳಿ ನಡೆಸಿದ ಮೋದಿ, ವಿಪಕ್ಷಗಳ ನಾಯಕರು ಕೀಳರಿಮೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ನಮ್ಮ ಏಳಿಗೆಯನ್ನು ಸಹಿಸಲು ಸಾಧ್ಯವಾಗದೆ ಸಂಸತ್ ಕಲಾಪಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದರು.
 

ವೆಬ್ದುನಿಯಾವನ್ನು ಓದಿ