ಮೆಮೋರಿ ಕಾರ್ಡ್‌ಗಾಗಿ ತಂದೆಯನ್ನೇ ಹತ್ಯೆ ಮಾಡಿದ ಪುತ್ರ

ಮಂಗಳವಾರ, 28 ಏಪ್ರಿಲ್ 2015 (16:17 IST)
ಮೊಬೈಲ್ ಫೋನ್‌ ಮೆಮೋರಿ ಕಾರ್ಡ್ ಕಳೆದಿರುವುದನ್ನು ಹುಡುಕಲು ನೆರವಾಗದ ತಂದೆಯನ್ನು ಪುತ್ರನೇ ಹತ್ಯೆ ಮಾಡಿದ ದಾರುಣ ಘಟನೆ ಮೆಹಬೂಬ್ ನಗರ್ ಜಿಲ್ಲೆಯ ವಿಪಂಗಾಂಡಲಾ ಗ್ರಾಮದಲ್ಲಿ ವರದಿಯಾಗಿದೆ

ಹತ್ಯೆಯಾದ ವ್ಯಕ್ತಿ 42 ವರ್ಷ ವಯಸ್ಸಿನ ಜಿ.ಹನಮಂತು ತನ್ನ ಪತ್ನಿ ಮತ್ತು ಪುತ್ರ ಜಿ.ರಾಜುನೊಂದಿಗೆ ಗ್ರಾಮದಲ್ಲಿರುವ ಸಣ್ಣ ಗುಡಿಸಿಲಿನಲ್ಲಿ ವಾಸವಾಗಿದ್ದರು  

ಹಿಂದಿನ ದಿನ ರಾತ್ರಿ ಅತಿಯಾಗಿ ಮದ್ಯ ಸೇವಿಸಿ ತೂರಾಡುತ್ತಾ ಮನೆಗೆ ಬಂದ ಮಗ ಮನೆಯಲ್ಲಿಟ್ಟಿದ ಮೆಮೋರಿ ಕಾರ್ಡ್ ಹುಡುಕಲು ಪ್ರಯತ್ನಿಸಿ ವಿಫಲವಾಗಿ ತಂದೆಗೆ ಮೆಮೋರಿ ಕಾರ್ಡ್ ಕುರಿತಂತೆ ಪ್ರಶ್ನಿಸಿದ್ದಾನೆ.

ಆದರೆ, ಮೆಮೋರಿ ಕಾರ್ಡ್ ಬಗ್ಗೆ ನನಗೆ ತಿಳಿದಿಲ್ಲ ಎಂದು ತಂದೆ ಹೇಳಿದಾಗ ಆಕ್ರೋಶಗೊಂಡ ಪುತ್ರ ರಾಜು ತಂದೆಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ನಂತರ ಹೋಗಿ ಮಲಗಿದ್ದಾನೆ. ಮನೆಯಲ್ಲಿರುವ ಎಲ್ಲರು ಮಲಗಿದ ನಂತರ ರಾಜು ಬಡಿಗೆ ಮತ್ತು ಕಲ್ಲಿನಿಂದ ತಂದೆ ಹನುಮಂತನ ತಲೆಗೆ ಹೊಡೆದಿದ್ದಾನೆ. ಇದರಿಂದಾಗಿ ಹನುಮಂತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆ ನಡೆದ ನಂತರ ಆರೋಪಿ ಪರಾರಿಯಾಗಿದ್ದಾನೆ.

ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ