ಸಮಾಜವನ್ನು ವಿಭಜಿಸುವ ಶಕ್ತಿಗಳನ್ನು ದೂರವಿಡಿ: ಮೋದಿ ವಿರುದ್ಧ ಸೋನಿಯಾ ಪರೋಕ್ಷ ವಾಗ್ದಾಳಿ

ಶನಿವಾರ, 3 ಅಕ್ಟೋಬರ್ 2015 (20:40 IST)
ಸಮಾಜವನ್ನು ಇಬ್ಬಾಗಿಸುವಂತಹ ಸುಳ್ಳು ಭರವಸೆಗಳನ್ನು ನೀಡುವಂತಹ ವ್ಯಕ್ತಿಗಳನ್ನು ತಿರಸ್ಕರಿಸಿ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಪರೋಕ್ಷವಾಗಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಬಿಹಾರ್ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷ ಪ್ರಸ್ತುತವಿರುವ ಮೀಸಲಾತಿಗೆ ಬದ್ಧವಾಗಿದೆ. ಆದರೆ, ಬಿಜೆಪಿ ಮೀಸಲಾತಿಯನ್ನು ರದ್ದುಗೊಳಿಸುವ ಸಂಚು ನಡೆಸುತ್ತಿದೆ ಎಂದು ಆರೋಪಿಸಿದರು.
 
ಬಿಹಾರ್ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು ಚುನಾವಣೆ ಫಲಿತಾಂಶ ಬಿಹಾರ್ ಮತ್ತು ದೇಶದ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ ಮತದಾರರು ಸಮಾಜವನ್ನು ವಿಭಜಿಸುವ ಶಕ್ತಿಗಳಿಗೆ ಮತಹಾಕದಂತೆ ಕರೆ ನೀಡಿದರು.
 
ನರೇಂದ್ರ ಮೋದಿ ಪ್ಯಾಕೇಜಿಂಗ್ ಮತ್ತು ರಿಪ್ಯಾಕೇಜಿಂಗ್‌ನಲ್ಲಿ ಚಾಣಾಕ್ಷ್ಯರಾಗಿದ್ದಾರೆ ಎಂದು ಲೇವಡಿ ಮಾಡಿದರು.
 
ಪ್ರಧಾನಿ ಮೋದಿ ಬಿಹಾರ್ ಜನತೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಕೇವಲ ಚುನಾವಣೆಗಾಗಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಹಿಂದಿನ ಸರಕಾರಗಳ ಯೋಜನೆಗಳಿಗೆ ಹೊಸ ರೂಪ ಕೊಟ್ಟು ತಾವೇ ಮಾಡಿದ್ದಾಗಿ ಬೀಗುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಲೇವಡಿ ಮಾಡಿದರು.
 

ವೆಬ್ದುನಿಯಾವನ್ನು ಓದಿ