ರಾಜೀವ್ ಗಾಂಧಿ ಪುಣ್ಯತಿಥಿ: ಗೌರವ ಸಲ್ಲಿಸಿದ ಸೋನಿಯಾ, ರಾಹುಲ್

ಗುರುವಾರ, 21 ಮೇ 2015 (15:24 IST)
ಇಂದು ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ 24 ನೇ ಪುಣ್ಯತಿಥಿಯಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಪತಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಜತೆಯಾಗಿ ಗೌರವ ಸಮರ್ಪಿಸಿದ್ದಾರೆ. 
 

 
ನವದೆಹಲಿಯ ವೀರಭೂಮಿಗೆ ತೆರಳಿ ಸೋನಿಯಾ ಕುಟುಂಬ ಗೌರವ ಸಮರ್ಪಣೆ ಮಾಡಿತು. ಈ ಸಂದರ್ಭದಲ್ಲಿ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಕೂಡ ಹಾಜರಿದ್ದರು. 
 
ಹಿರಿಯ ಕಾಂಗ್ರೆಸ್ ನಾಯಕರಾದ ಅಜಯ್ ಮಾಕನ್, ಪಿಸಿ ಚಾಕೊ ಸಹ ರಾಜೀವ್ ಗಾಂಧಿಯವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
 
1991ರಲ್ಲಿ ಚುನಾವಣಾ ಪ್ರಚಾರಕ್ಕೆಂದು ತಮಿಳುನಾಡಿನ ಶ್ರಿ ಪೆರಂಬುದೂರ್‌ಗೆ ತೆರಳಿದ್ದಾಗ ಆತ್ಮಹತ್ಯಾ ಬಾಂಬ್ ದಾಳಿಗೆ ಸಿಲುಕಿ ರಾಜೀವ್ ಗಾಂಧಿ ಮರಣವನ್ನಪ್ಪಿದ್ದರು. 

ವೆಬ್ದುನಿಯಾವನ್ನು ಓದಿ