ಸರಕಾರದ ಆಫರ್ ತಿರಸ್ಕರಿಸಿದ ಸೋನಿಯಾ: ಮೊದ್ಲು ಕಳಂಕಿತರ ರಾಜೀನಾಮೆ ನಂತರ ಚರ್ಚೆ ಎಂದ ಕಾಂಗ್ರೆಸ್

ಸೋಮವಾರ, 3 ಆಗಸ್ಟ್ 2015 (16:05 IST)
ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಲು ಸಿದ್ದ ಸದನ ಸುಗಮವಾಗಿ ನಡೆಯುವಂತಾಗಬೇಕು ಎನ್ನುವ ಸರಕಾರದ ಆಫರ್ ತಿರಸ್ಕರಿಸಿದ ಸೋನಿಯಾ ಗಾಂಧಿ, ಮೊದಲು ಆರೋಪಿಗಳು ರಾಜೀನಾಮೆ ನೀಡಲಿ ಎಂದು ಗುಡುಗಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಮತ್ತೆ ಮಧ್ಯಪ್ರದೇಶ, ರಾಜಸ್ಥಾನ ಮುಖ್ಯಮಂತ್ರಿಗಳ ಪ್ರಕರಣಗಳ ಬಗ್ಗೆ ಮೋದಿ ಮೌನವಾಗಿದ್ದು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. 
 
ಮನ್ ಕಿ ಬಾತ್ ಚಾಂಪಿಯನ್ ಮೌನ ವತ್ರ ಆಚರಿಸುತ್ತಿರುವುದನ್ನು ನೋಡಿದಲ್ಲಿ ಅವರ ಸಂಪುಟದ ಸಚಿವರು ಮತ್ತು ಇಬ್ಬರು ಮುಖ್ಯಮಂತ್ರಿಗಳು ತಪ್ಪು ಎಸಗಿರುವ ಬಗ್ಗೆ ಅವರಿಗೆ ಮಾಹಿತಿಯಿದೆ ಎಂದು ಲೇವಡಿ ಮಾಡಿದರು.
 
ಸುಷ್ಮಾ, ವಸುಂಧರಾ ರಾಜೇ ಮತ್ತು ಶಿವರಾಜ್ ಸಿಂಗ್ ಚೌಹಾನ್ ರಾಜೀನಾಮೆ ನೀಡುವವರೆಗೆ ಸಂಸತ್ತಿನಲ್ಲಿ ಯಾವುದೇ ರೀತಿಯ ಚರ್ಚೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸರಕಾರಕ್ಕೆ ಸ್ಪಷ್ಟಪಡಿಸಿದ್ದಾರೆ.
 
ಕಳೆದ 1993ರಿಂದ ಕನಿಷ್ಠ 5 ಬಾರಿ ಸಂಸತ್ ಅಧಿವೇಶನಗಳಿಗೆ ಅಡ್ಡಿ ಮಾಡಿದ್ದ ಬಿಜೆಪಿ, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಹೊರಟಿದೆ. ಮೊದಲು ಕಳಂಕಿತರು ರಾಜೀನಾಮೆ ನೀಡಲಿ ನಂತರ ಚರ್ಚೆ ನಡೆಸಲಿ ಎನ್ನುವುದೇ ಕಾಂಗ್ರೆಸ್ ಪಕ್ಷದ ನಿಲುವು ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ