ವಿದೇಶದಲ್ಲಿ ಹಿಂದಿನ ಸರಕಾರಗಳಿಗೆ ಟೀಕೆ: ಮೋದಿಗೆ ಸೋನಿಯಾ ಛೀಮಾರಿ

ಬುಧವಾರ, 6 ಮೇ 2015 (15:04 IST)
ವಿದೇಶಿ ನೆಲದಲ್ಲಿ ಹಿಂದಿನ ಸರ್ಕಾರಗಳನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದಾರೆ. 
 
ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದ ಸೋನಿಯಾ, ವಿದೇಶದಲ್ಲಿ ನಮ್ಮ ದೇಶದ ವಿರುದ್ಧ ನಮ್ಮವರೇ ಟೀಕೆಗಿಳಿದಿದ್ದು ಇದೇ ಪ್ರಥಮ ಬಾರಿ ಎಂದು ಗುಡುಗಿದ್ದಾರೆ. 
 
ಕಾಂಗ್ರೆಸ್ ನಂಬಿರುವ ಸಿದ್ಧಾಂತಗಳ ವಿರುದ್ಧ ಮೋದಿ ಸರಕಾರ ನಿಂತಿದ್ದು ತಾವು ಎನ್‌ಡಿಎ ಸರಕಾರದ ವಿರುದ್ಧ ಹೋರಾಟಕ್ಕಿಳಿಯುವುದಾಗಿ ಸೋನಿಯಾ ಘೋಷಿಸಿದ್ದಾರೆ. 
 
ಆರ್ಥಿಕತೆ ಕುಸಿಯುತ್ತಿದ್ದು, ರಫ್ತು ಪ್ರಮಾಣದಲ್ಲಿ ಸಹ ಇಳಿಕೆ ಕಂಡುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸೋನಿಯಾ, ಮೋದಿ ಸರಕಾರದ ತೆರಿಗೆ ನೀತಿ ಕೆಲವು ಕಾರ್ಪೋರೇಟ್‌ಗಳ ಪರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡಿದವರನ್ನು ಸಹ ಈಗ ಕೊಂಡಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ