ನರೇಂದ್ರ ಮೋದಿ ಸಮ್ಮುಖದಲ್ಲೇ ಸಿಎಂ ಸೊರೇನ್‌ಗೆ ಅವಮಾನ

ಗುರುವಾರ, 21 ಆಗಸ್ಟ್ 2014 (20:05 IST)
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲೇ ಅವಮಾನಿಸಿದ ಪ್ರಸಂಗದಿಂದ ಕಾವೇರಿದ ಪರಿಸ್ಥಿತಿ ಉದ್ಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ಈ ಘಟನೆಯ ಬಗ್ಗೆ ರಾಷ್ಟ್ರಕ್ಕೆ ಕ್ಷಮಾಪಣೆ ಕೇಳದಿದ್ದರೆ ಬಿಜೆಪಿಯ ಯಾವ ಸಚಿವರಿಗೂ ಜಾರ್ಖಂಡ್ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಜೆಎಂಎಂ ಎಚ್ಚರಿಕೆ ನೀಡಿದೆ. 
 
ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ನಂತರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ರ‌್ಯಾಲಿಯಲ್ಲಿ ನೆರೆದಿದ್ದ ಜನರು  ಅವಮಾನಿಸಿದ್ದರು. ಸೊರೇನ್ ಭಾಷಣ ಮಾಡಲು ವೇದಿಕೆಗೆ ಏರುತ್ತಿದ್ದಂತೆ, ರ‌್ಯಾಲಿಯಲ್ಲಿದ್ದ ಜನರು  ಮೋದಿ-ಮೋದಿ ಎಂಬ  ಘೋಷಣೆಗಳನ್ನು ಕೂಗಲಾರಂಭಿಸಿ ಲೇವಡಿ ಮಾಡಲಾಂಭಿಸಿದರು.

ಮಂಗಳವಾರ ಕೂಡ ಹರ್ಯಾಣದ ಮೋದಿ ರ‌್ಯಾಲಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಭಾಷಣಕ್ಕೆ ಕೂಡ ಬಿಜೆಪಿ ಬೆಂಬಲಿಗರು ಅಡ್ಡಿಪಡಿಸಿದ್ದರು. ಇಂತಹ ಅವಮಾನಕರ ಘಟನೆ ಬಳಿಕ ಸಿಎಂ ಹೂಡಾ ಮೋದಿ ಜೊತೆ ತಾವು ಮುಂದೆಂದೂ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ