ಆರೆಸ್ಸೆಸ್ ನಾಯಕರು ಸಲಿಂಗಕಾಮಿಗಳು: ಸಚಿವ ಆಜಂ ಖಾನ್

ಸೋಮವಾರ, 30 ನವೆಂಬರ್ 2015 (17:30 IST)
ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರಪ್ರದೇಶದ ನಗರಾಭಿವೃದ್ಧಿ ಖಾತೆ ಸಚಿವ ಆಜಂಖಾನ್, ಆರೆಸ್ಸೆಸ್ ಸದಸ್ಯರು ಸಲಿಂಗಕಾಮಿಗಳಂತೆ ಎಂದು ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
 
ನಯಿ ದುನಿಯಾ ವರದಿಯ ಪ್ರಕಾರ, ಸಲಿಂಗಕಾಮದ ಬಗ್ಗೆ ವಿವರಣೆ ನೀಡುತ್ತಿದ್ದ ಸಚಿವ ಆಜಂ ಖಾನ್, ಆರೆಸ್ಸೆಸ್ ಸದಸ್ಯರು ಕೂಡಾ ಸಲಿಂಗಕಾಮಿಗಳಂತೆ ಎಂದು ಹೇಳಿದ್ದಾರೆ.
 
ಆರೆಸ್ಸೆಸ್ ಸದಸ್ಯರು ಸಲಿಂಗಕಾಮಿಗಳು ಎನ್ನುವ ಹೇಳಿಕೆಯನ್ನು ಸಮರ್ಥಿಸಿಕೊಂಡ ಆಜಂ, ಆದ್ದರಿಂದಲೇ ಆರೆಸ್ಸೆಸ್ ಸದಸ್ಯರು ವಿವಾಹವಾಗುವುದಿಲ್ಲ ಎಂದು ಉದಾಹರಣೆ ನೀಡಿದರು.
 
ಸಚಿವ ಆಜಂ ಖಾನ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಆರೆಸ್ಸೆಸ್, ಸಮಾಜವಾದಿ ಪಕ್ಷದ ನಾಯಕ ಸಚಿವ ಆಜಂ ಖಾನ್ ಮಾನಸಿಕ ಸಮತೋಲವನ್ನು ಕಳೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದೆ. ವಿಶ್ವ ಹಿಂದೂ ಪರಿಷತ್ ಕೂಡಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 
 
ಸುಪ್ರೀಂಕೋರ್ಟ್ ಮತ್ತೊಮ್ಮೆ ಸಲಿಂಗಕಾಮಿಗಳು ಬಗ್ಗೆ ನೀಡಿದ ತೀರ್ಪನ್ನು ಮತ್ತೆ ಪುನರ್ ಪರಿಶೀಲಿಸಬೇಕು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿಕೆ ನೀಡಿದ ನಂತರ ಸಚಿವ ಆಜಂಖಾನ್ ಹೇಳಿಕೆ ನೀಡಿದ್ದಾರೆ.
 
ಸ್ವಾತಂತ್ರ್ಯಾನಂತರ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸರಕಾರಗಳ ಪರಮಾಧಿಕಾರಗಳಿಂದಾಗಿ ದುರ್ಬಲಗೊಂಡಿದೆ. ಆದಾಗ್ಯೂ ಹಲವಾರು ಬಾರಿ ಮಹತ್ವದ ತೀರ್ಪು ನೀಡಿ ನ್ಯಾಯಾಂಗ ತನ್ನ ಘನತೆಯನ್ನು ಕಾಪಾಡಿಕೊಂಡಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದರು.

ವೆಬ್ದುನಿಯಾವನ್ನು ಓದಿ