ಸೋಲುವ ಭೀತಿಯಿಂದ ಜನತಾ ಪರಿವಾರದಿಂದ ಹೊರಬಂದ ಮುಲಾಯಂ ಪಕ್ಷ: ಬಿಜೆಪಿ ಲೇವಡಿ

ಗುರುವಾರ, 3 ಸೆಪ್ಟಂಬರ್ 2015 (19:43 IST)
ಜನತಾ ಪರಿವಾರದಿಂದ ಸಮಾಜವಾದಿ ಪಕ್ಷ ಹೊರಬಂದಿರುವುದು ಸೀಟು ಹಂಚಿಕೆ ಅಸಮಾಧಾನದಿಂದಲ್ಲ. ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಜನತಾ ಪರಿವಾರ ಸೋಲುತ್ತದೆ ಎನ್ನುವ ಕಾರಣದಿಂದಾಗಿ ಹೊರಬಂದಿದೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.
 
ಇಂದು ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಜನತಾ ಪರಿವಾರದಿಂದ ಹೊರಬಂದಿರುವುದು ಸೀಟು ಹಂಚಿಕೆ ಕಾರಣವಲ್ಲ ಅದೊಂದು ನೆಪ ಮಾತ್ರ. ನಿಜವಾದ ಕಾರಣವೆಂದರೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುತ್ತೇವೆ ಎನ್ನುವ ಆತಂಕದಿಂದ ಎಂದು ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಢಿ ವ್ಯಂಗ್ಯವಾಡಿದ್ದಾರೆ.
 
ಬಿಜೆಪಿ ವಿರೋಧಿ ಮೈತ್ರಿಕೂಟದಿಂದ ಹೊರಬಂದ ಸಮಾಜವಾದಿ ಪಕ್ಷ ಬಿಹಾರ್‌ನಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಿದ್ದತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಸುದ್ದಿಗಾರರೊಂದಿಗೆ ಮಾತನಾಡಿ, ಜನತಾ ಪರಿವಾರ ರಾಜ್ಯದ 243 ಸೀಟುಗಳಲ್ಲಿ ಕೇವಲ ಐದು ಸೀಟುಗಳನ್ನು ನೀಡಿರುವುದು ಅಸಮಧಾನ ತಂದಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ