ಶ್ರೀರಾಮಸೇನೆಗೆ ಗೋವಾ ಪ್ರವೇಶಕ್ಕೆ ನಿಷೇಧ: ಗೋವಾ ಸಿಎಂ

ಬುಧವಾರ, 30 ಜುಲೈ 2014 (14:11 IST)
ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮಸೇನೆಗೆ ಗೋವಾದಲ್ಲಿ ಪ್ರವೇಶಿಸಲು ಅಥವಾ ಶಾಖೆಯನ್ನು ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. 
 
ಅಡಳಿತರೂಢ ಬಿಜೆಪಿ ಪಕ್ಷದ ಸದಸ್ಯರೊಬ್ಬರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಪಾರಿಕ್ಕರ್, ಶ್ರೀರಾಮಸೇನೆಗೆ ಗೋವಾದಲ್ಲಿ ಪ್ರವೇಶವಿಲ್ಲ ಎಂದು ಲಿಖಿತ ಉತ್ತರ ನೀಡಿದ್ದಾರೆ. 
 
ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಮುತಾಲಿಕ್ ಪ್ರಯತ್ನಿಸುತ್ತಿದ್ದಾರೆ ಎನ್ನುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಪತ್ತೆ.ಯಾಗಿಲ್ಲ ಎಂದು ಮುಖ್ಯಮಂತ್ರಿ ಪಾರಿಕ್ಕರ್ ತಿಳಿಸಿದ್ದಾರೆ.
 
ಮಂಗಳೂರಿನ ಪಬ್ ಘಟನೆಯಲ್ಲಿ ಯುವಕ ಯುವತಿಯರ ಮೇಲೆ ಹಲ್ಲೆ ನಡೆಸಿ ಕುಖ್ಯಾತಿ ಪಡೆದಿದ್ದ ಶ್ರೀರಾಮಸೇನೆ, ಗೋವಾದಲ್ಲಿ ಶಾಖೆ ಆರಂಭಿಸುವ ವರದಿಗಳಿಂದಾಗಿ ರಾಜಕಾರಣಿಗಳು ಮತ್ತು ನಾಗರಿಕರ ಮಧ್ಯೆ ಭಾರಿ ಚರ್ಚೆಗೆ ಕಾರಣವಾಗಿತ್ತು.
 
ಗೋವಾದಲ್ಲಿರುವ ಪಬ್ ಸಂಸ್ಕ್ರತಿಯನ್ನು ಹೊಡೆದೊಡಿಸಿ ಭಾರತೀಯ ಸಂಸ್ಕ್ರತಿಯನ್ನು ಎತ್ತಿಹಿಡಿಯಿರಿ ಎಂದು ಇತ್ತೀಚೆಗೆ ಪ್ರಮೋದ್ ಮುಕಾಲಿಕ್ ಕರೆ ನೀಡಿದ್ದರು.
 
ಪಬ್ ಸಂಸ್ಕ್ರತಿಯ ವಿರುದ್ಧ ಹೋರಾಡುವವರಿಗೆ ಅಗತ್ಯವಾದಲ್ಲಿ ಕತ್ತಿ ಮತ್ತು ಭಗವಧ್ಗೀತೆ ಪುಸ್ತಕಗಳನ್ನು ಕೂಡಾ ನೀಡುವುದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಘೋಷಿಸಿದ್ದರು. 
 

ವೆಬ್ದುನಿಯಾವನ್ನು ಓದಿ