ಅಮೀರ್ ಖಾನ್, ಇಸ್ಲಾಂ ಬಗ್ಗೆ ಮಾತನಾಡದಂತೆ ಬೆದರಿಕೆ ಕರೆ: ಪ್ರಮೋದ್ ಮುತಾಲಿಕ್

ಗುರುವಾರ, 26 ನವೆಂಬರ್ 2015 (16:20 IST)
ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಇಸ್ಲಾಂ ಬಗ್ಗೆ ಮಾತನಾಡದಂತೆ ಬೆದರಿಕೆ ಕರೆ ಬಂದಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
 
ಇಂತಹ ಬೆದರಿಕೆ ಕರೆಗಳಿಂದ ಹಿಂದುತ್ವದ ಪರ ನನ್ನ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ. ಈ ಹಿಂದೆ ಕೂಡಾ ಇಂತಹ ಅನೇಕ ಬೆದರಿಕೆ ಕರೆಗಳು ಬಂದಿವೆ ಎಂದು ಮುತಾಲಿಕ್ ತಿಳಿಸಿದ್ದಾರೆ.  
 
ಕಳೆದ 2009ರಲ್ಲಿ ಮಂಗಳೂರಿನಲ್ಲಿ ಯುವಕ, ಯುವತಿಯರ ಮೇಲೆ ನಡೆದ ಪಬ್ ದಾಳಿಯಿಂದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖ್ಯಾತರಾಗಿದ್ದರು.
 
ದೇಶದಲ್ಲಿ ಸಹಿಷ್ಣುತೆಯ ವಾತಾವರಣವಿದೆ. ಹಿಂದೂ ಮುಸಲ್ಮಾನರು ಏಕತೆಯಿಂದ ಜೀವನ ನಡೆಸುತ್ತಿದ್ದಾರೆ. ಅಮೀರ್ ಖಾನ್ ಹೇಳಿಕೆ ಯಾವುದೇ ಕಾರಣಕ್ಕೂ ಸ್ವೀಕಾರ್ಹವಲ್ಲ ಎಂದು ಗುಡುಗಿದರು.
 
ದೇಶದ ಜನತೆಯ ಪ್ರೀತಿಯಿಂದಲೇ ಅಮೀರ್ ಖಾನ್ ನಟಿಸುತ್ತಿರುವ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆಹೊಡೆದಿವೆ. ಒಂದು ವೇಳೆ ಅಸಹಿಷ್ಣುತೆ ವಾತಾವರಣವಿದ್ದಲ್ಲಿ ಅವರ ಚಿತ್ರಗಳು ತೋಪೆದ್ದು ಹೋಗುತ್ತಿದ್ದವು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್  ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ