ಪಾಕ್ ಆಕ್ರಮಿತ ಕಾಶ್ಮಿರದ ಯುವತಿಯೊಂದಿಗೆ ವಿವಾಹವಾದ ಶ್ರೀನಗರ್ ಪೊಲೀಸ್ ಅಧಿಕಾರಿ

ಶುಕ್ರವಾರ, 2 ಸೆಪ್ಟಂಬರ್ 2016 (20:29 IST)
ಕಾಶ್ಮಿರದ ಯುವ ಪೊಲೀಸ್ ಅಧಿಕಾರಿಯೊಬ್ಬರು ಪಾಕ್ ಆಕ್ರಮಿತ ಕಾಶ್ಮಿರದ ಯುವತಿಯನ್ನು ವಿವಾಹವಾಗಿ ಅಚ್ಚರಿ ಮೂಡಿಸಿದ್ದಾರೆ, 
 
ಜಮ್ಮು ಕಾಶ್ಮಿರದಾದ್ಯಂತ ಪಾಕಿಸ್ತಾನ ಪರ ಘೋಷಣೆಗಳ ಮಧ್ಯೆ ಪಿಓಕೆ ಮೂಲದ ಯುವತಿಯನ್ನು ವಿವಾಹವಾಗಿ ಭಾರತ ಮತ್ತು ಪಾಕ್ ಆಕ್ರಮಿತ ಕಾಶ್ಮಿರ ಪ್ರದೇಶದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸಿದ್ದಾರೆ.
 
ಜಮ್ಮು ಕಾಶ್ಮಿರದ ಪೊಲೀಸ್ ಇಲಾಖೆಯಲ್ಲಿ ಸಬ್‌ಇನ್ಸೆಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಒವೈಸ್ ಗಿಲಾನಿ, ಪಾಕ್ ಆಕ್ರಮಿತ ಕಾಶ್ಮಿರದ ಮುಜಾಫರಾಬಾದ್‌ ನಿವಾಸಿಯಾಗಿರುವ ಫೈಜಾ ಗಿಲಾನಿಯವರೊಂದಿಗೆ ಸಪ್ತಪದಿ ತುಳಿದಿದ್ದಾರೆ. 
 
ಕಾಶ್ಮಿರದಲ್ಲಿ ಹಿಂಸಾಚಾರ ಮುಂದುವರಿದಿದ್ದರಿಂದ ಕೇವಲ ಕುಟುಂಸ್ಥರು ಮತ್ತು ಆತ್ಮಿಯರು ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ