ಯಾಕೂಬ್ ಮೆಮನ್‌ಗೆ ಗಲ್ಲಿಗೇರಿಸುವ ಬಾಬು ಜಲ್ಲಾದ್ ನಾಗ್ಪುರ್ ಜೈಲಿಗೆ ಬಂದ

ಬುಧವಾರ, 29 ಜುಲೈ 2015 (20:08 IST)
ಪುಣೆಯ ಯರವಾಡಾ ಜೈಲಿನಲ್ಲಿ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಿದ್ದ ವ್ಯಕ್ತಿಯೇ 1993ರ ಮುಂಬೈ ಸ್ಫೋಟದ ಆರೋಪಿ ಯಾಕೂಬ್ ಅಬ್ದುಲ್ ರಜಾಕ್‌ನನ್ನು ಗಲ್ಲಿಗೇರಿಸಲಿದ್ದಾನೆ ಎಂದು ಮೂಲಗಳು ವರದಿ ಮಾಡಿವೆ. 
 
ಕಸಬ್‌ನನ್ನು ಗಲ್ಲಿಗೇರಿಸಿದ ವ್ಯಕ್ತಿಯ ಅಡ್ಡಹೆಸರು "'ಬಾಬು ಜಲ್ಲಾದ್" ಕಳೆದ ವಾರವೇ ನಾಗ್ಪುರ್ ಜೈಲಿಗೆ ಬಂದಿದ್ದಾನೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. 
 
ಯಾಕೂಬ್ ಮೆಮನ್ ಗಲ್ಲಿಗೇರಿಸುವ ಕುರಿತಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯ ಮಧ್ಯೆಯೇ ನಾಗ್ಪುರ್ ಸೆಂಟ್ರಲ್ ಜೈಲಿನಲ್ಲಿ ಯಾಕೂಬ್‌ ಗಲ್ಲಿಗೇರಿಸಲು ಸಿದ್ದತೆ ನಡೆಸಲಾಗುತ್ತಿದೆ. 
 
ಯಾಕೂಬ್‌ನನ್ನು ಗಲ್ಲಿಗೇರಿಸುವ ವ್ಯಕ್ತಿ ಯರವಾಡಾ ಜೈಲಿನಲ್ಲಿ ಪೊಲೀಸ್ ಪೇದೆಯಾಗಿದ್ದು, ಯಾಕುಬ್ ರಜಾಕ್‌ನನ್ನು ಗಲ್ಲಿಗೇರಿಸುವ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ.
 
ಕಳೆದ ವಾರ ನಾಗ್ಪುರ್‌ಕ್ಕೆ ಬಂದ ಬಾಬು ಜಲ್ಲಾದ್ ತಾತ್ಕಾಲಿಕವಾಗಿ ನಿರ್ಮಿಸಲಾದ ಗಲ್ಲಿಗೇರಿಸುವ ಸ್ಥಳದ ಪರಿಶೀಲನೆ ಮಾಡಿದ್ದಾನೆ ಎನ್ನಲಾಗಿದೆ. 
 
ಇದಕ್ಕಿಂತ ಮೊದಲು ಯಾಕೂಬ್ ರಜಾಕ್‌ನನ್ನು ಗಲ್ಲಿಗೇರಿಸಲು ಮೂವರು ಪೇದೆಗಳನ್ನು ಆಯ್ಕೆ ಮಾಡಲಾಗಿತ್ತು. ಬಾಬು ಜಲ್ಲಾದ್ ಯಾಕೂಬ್‌ನನ್ನು ಗಲ್ಲಿಗೇರಿಸುತ್ತಾನೋ ಅಥವಾ ಮೇಲ್ವಿಚಾರಣೆ ಮಾಡುತ್ತಾನೋ ಎನ್ನುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ನಾಗ್ಪುರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ