ಹನುಮಂತಪ್ಪ ಕೊಪ್ಪದ್‌ಗೆ ಕಿಡ್ನಿ ನೀಡಲು ಮುಂದಾದ ನಿವೃತ್ತ ಸಿಐಎಸ್ಎಫ್ ಪೊಲೀಸ್ ಪೇದೆ

ಬುಧವಾರ, 10 ಫೆಬ್ರವರಿ 2016 (16:33 IST)
ಸಿಯಾಚಿನ್ ಹಿಮಪಾತದಲ್ಲಿ ಬದುಳಿದು ಕಿಡ್ನಿ ವೈಫಲ್ಯದಿಂದ ಬಳಲುತ್ತಾ ಕೋಮಾದಲ್ಲಿರುವ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರಿಗೆ ನಿವೃತ್ತ ಸಿಐಎಸ್‌ಎಫ್ ನಿವೃತ್ತ ಪೊಲೀಸ್ ಪೇದೆಯೊಬ್ಬರು ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದಾರೆ. 
 
ರಾಜ್ಯದ ರಾಜಧಾನಿಯಿಂದ 167 ಕಿ.ಮೀ ದೂರದಲ್ಲಿರುವ ಲಖೀಮ್‌ಪುರ್ ಖೇರಿ ನಿವಾಸಿಯಾದ ವಿವಾಹಿತ ಮಹಿಳೆ ನಿಧಿ ಪಾಂಡೆ, ಸ್ಥಳಿಯ ಸುದ್ದಿ ಸಂಸ್ಥೆಯೊಂದನ್ನು ಸಂಪರ್ಕಿಸಿ, ಕೊಪ್ಪದ ಚಿಕಿತ್ಸೆ ಪಡೆಯುತ್ತಿರುವ ಆರ್‌ಆರ್ ಆಸ್ಪತ್ರೆಯನ್ನು ಸಂಪರ್ಕಿಸುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಹನುಮಂತಪ್ಪ ಕೊಪ್ಪದ ಕೋಮಾದಲ್ಲಿದ್ದು ಕಿಡ್ನಿ ಮತ್ತು ಕರುಳಿನ ವೈಫಲ್ಯದಿಂದ ಬಳಲುತ್ತಿದ್ದು ಅವರ ಬೇಗ ಗುಣಮುಖರಾಗಲಿ ಎಂದು ದೇಶಾದ್ಯಂತ ಜನತೆ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
 
ದೆಹಲಿ ನಿವಾಸಿಯಾದ ನಿವೃತ್ತ ಸಿಐಎಸ್‌ಎಫ್ ಪೊಲೀಸ್ ಪೇದೆ ಪ್ರೇಮ್ ಸ್ವರೂಪ್, ಆರ್‌ ಆರ್‌ ಆಸ್ಪತ್ರೆಗೆ ಧಾವಿಸಿ ತಾವು ಕೂಡಾ ಕಿಡ್ನಿ ನೀಡಲು ಸಿದ್ದರಾಗಿರುವುದಾಗಿ ತಿಳಿಸಿದ್ದಾರೆ.
 
ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಕಿಡ್ನಿ ವಿಫಲವಾಗಿದೆ ಎನ್ನುವ ಸುದ್ದಿ ತಿಳಿದು ಕಿಡ್ನಿ ನೀಡಲು ಬಂದಿದ್ದೇನೆ. ಅಂತಹ ಧೀರ ಯೋಧನಿಗಾಗಿ ದೇಹದ ಯಾವುದೇ ಭಾಗವಾದರೂ ದಾನ ಕೊಡಲು ಸಿದ್ದ ಎಂದು ಘೋಷಿಸಿದ್ದಾರೆ.
 
ಮುಂದಿನ 48 ಗಂಟೆಗಳು ಕೊಪ್ಪದ ಅವರಿಗೆ ತುಂಬಾ ಮಹತ್ವವಾಗಿದೆ. ಅವರ ದೇಹಸ್ಥಿತಿ ತುಂಬಾ ವಿಷಮಿಸುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ