ಇತರ ದೇಶಗಳಂತೆ ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿಲ್ಲ: ಲಷ್ಕರ್ ಉಗ್ರ ಅಜೀಜ್

ಬುಧವಾರ, 24 ಫೆಬ್ರವರಿ 2016 (17:30 IST)
ಇತರ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಮುಸ್ಲಿಮರು ಕೆಟ್ಟ ಪರಿಸ್ಥಿತಿಯಲ್ಲಿ ಬದುಕುತ್ತಿಲ್ಲವಾದ್ದರಿಂದ ಬಾರತದಲ್ಲಿ ಜಿಹಾದ್ ಹೋರಾಟ ಅಗತ್ಯವಿಲ್ಲ ಎಂದು ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೊಯಿಬಾ ಮುಖಂಡ ಅಬ್ದುಲ್ ಅಜೀಜ್ ಅಲಿಯಾಸ್ ಗಿಡ್ಡಾ ಹೇಳಿದ್ದಾರೆ.
 
ಸೌದಿ ಅರೇಬಿಯಾ ದೇಶದಿಂದ ಉಚ್ಚಾಟನೆಗೊಂಡು ಹೈದ್ರಾಬಾದ್‌ಗೆ ಬಂದಿಳಿದು, ತೆಲಂಗಾಣಾ ಪೊಲೀಸರಿಂದ ಬಂಧಿತನಾದ ಅಬ್ದುಲ್ ಅಜೀಜ್, ಪಾಕಿಸ್ತಾನದ ಎಲ್‌ಇಟಿ ಮುಖಂಡರಾದ ಮೊಹಮ್ಮದ್ ಇಸ್ಮಾಯಿಲ್ ಮತ್ತು ಸಲೀಮ್ ಜುನೈದ್ ಅವರಿಗೆ ಸಂದೇಶ ರವಾನಿಸಿ, ಇತರ ದೇಶಗಳಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿರುವಂತೆ ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿಲ್ಲ. ಆದ್ದರಿಂದ, ಬಾರತದಲ್ಲಿ ಜಿಹಾದ್ ಹೋರಾಟ ಅಗತ್ಯವಿಲ್ಲ ಎಂದು ತಿಳಿಸಿದ್ದಾನೆ.
 
ಮಾಧ್ಯಮ ವರದಿಯ ಪ್ರಕಾರ, ಅಬ್ದುಲ್ ಅಜೀಜ್‌ಗೆ ಲಷ್ಕರ್ ಉಗ್ರರು 1997ರಲ್ಲಿ ಇಸ್ಮಾಯಿಲ್ ಮತ್ತು ಜುನೈದ್ ಭಾರತದಲ್ಲಿ ಜಿಹಾದ್ ಹೋರಾಟ ನಡೆಸುವಂತೆ ಆದೇಶ ನೀಡಿದ್ದರು.
 
ಉಗ್ರ ಅಬ್ದುಲ್ ಅಜೀಜ್, ಭಾರತದಲ್ಲಿ ಜಿಹಾದ್ ಹೋರಾಟ ನಡೆಸುವ ಬದಲು ಬೋಸ್ನಿಯಾ ಮತ್ತು ಚೆಚೆನ್ನಾದಲ್ಲಿ ಜಿಹಾದ್ ಹೋರಾಟ ನಡೆಸಲು ಆದ್ಯತೆ ನೀಡಿ ರಷ್ಯಾಗೆ ತೆರಳಿದ್ದ ಎನ್ನಲಾಗಿದೆ.
 
ಏತನ್ಮಧ್ಯೆ, ಸೌದಿ ಮೂಲದ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಆರ್ಗನಜೇಶನ್ ನಿರ್ದೇಶಕ ಶೇಖ್ ಅಹ್ಮದ್, ಬಾಬ್ರಿ ಮಸೀದಿ ನೆಲಸಮಗೊಳಿಸಿದ ಭಾರತದಲ್ಲಿ, ಜಿಹಾದ್ ಹೋರಾಟ ಆರಂಭಿಸುವಂತೆ ಪ್ರೇರೇಪಿಸಿ ಅಜೀಜ್‌ಗೆ 9.5 ಲಕ್ಷ ರೂಪಾಯಿಗಳನ್ನು ನೀಡಿದ್ದ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ