ರಾಜೇಗೆ ಸಂಕಷ್ಟ: ಢೋಲ್‌ಪುರ್ ಅರಮನೆಯ ಹೊಸ ದಾಖಲಾತಿ ಬಿಡುಗಡೆ ಮಾಡಿದ ಕಾಂಗ್ರೆಸ್

ಮಂಗಳವಾರ, 30 ಜೂನ್ 2015 (20:26 IST)
ಲಲಿತ್ ಮೋದಿ ಪ್ರಕರಣದಲ್ಲಿ ಸಿಲುಕಿ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಢೋಲ್‌ಪುರ್ ಅರಮನೆ ಸರಕಾರಕ್ಕೆ ಸೇರಿದ್ದು ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದೆ.
 
ಲಲಿತ್ ಮೋದಿ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. 
 
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್, ಡೋಲ್‌ಪುರ್ ಅರಮನೆಯಲ್ಲಿ ಚರಾಸ್ಥಿಗಳು ರಾಜ ಕುಟುಂಬಕ್ಕೆ ಸೇರಿದ್ದು ಆದರೆ ಢೋಲ್‌ಪುರ್ ಅರಮನೆ ಸಾರ್ವಜನಿಕ ಆಸ್ತಿ ಎಂದು ರಾಜೇ ಪುತ್ರ ದುಶ್ಯಂತ ಸಿಂಗ್ ಮತ್ತು ಅವರ ತಂದೆ ಹೇಮಂತ್ ಸಿಂಗ್ ನಡುವೆ ಒಪ್ಪಂದವಾದ ದಾಖಲೆಗಳನ್ನು ಬಹಿರಂಗಪಡಿಸಿದರು. 
 
ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸುವವರೆಗೆ ಪ್ರತಿನಿತ್ಯ ಹೊಸ ಹೊಸ ಮಾಹಿತಿಗಳನ್ನು ಬಹಿರಂಗಪಡಿಸಲು ಸಿದ್ದವಾಗಿರುವುದಾಗಿ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ