ಮನೆಯಿಂದ ಹಣ, ಚಿನ್ನ ಕದ್ದು ಶಿಕ್ಷಕಿಯೊಂದಿಗೆ ಪರಾರಿಯಾದ 14 ರ ಬಾಲಕ

ಸೋಮವಾರ, 5 ಡಿಸೆಂಬರ್ 2016 (13:26 IST)
ಮನೆಯಿಂದ 8 ಸಾವಿರ ರೂ ಹಣ ಕದ್ದ 14 ರ ಬಾಲಕ 22 ವರ್ಷ ವಯಸ್ಸಿನ ಶಿಕ್ಷಕಿಯೊಂದಿಗೆ ಪರಾರಿಯಾದ ವಿಚಿತ್ರ ಘಟನೆ ವರದಿಯಾಗಿದೆ.
 
ಶಾಲೆಯ ಮಾಲೀಕನ ಪುತ್ರಿಯಾದ 22 ವರ್ಷ ವಯಸ್ಸಿನ ಶಿಕ್ಷಕಿ, 14 ವರ್ಷ ವಯಸ್ಸಿನ ಬಾಲಕನೊಂದಿಗೆ ಲವ್ವಿ ಡವ್ವಿ ನಡೆಸಿದ್ದಳು ಎನ್ನಲಾಗಿದೆ. ಡಿಸೆಂಬರ್ 1 ರಂದು ರಾತ್ರಿ ಇಬ್ಬರು ಓಡಿಹೋಗಿದ್ದಾರೆ. ಮಾರನೇ ದಿನ ಶಿಕ್ಷಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
 ಶಿಕ್ಷಕಿಯ ಒತ್ತಡದಿಂದಾಗಿ ನಮ್ಮ ಪುತ್ರ ಮನೆಯಿಂದ ಹಣ ಮತ್ತು ಚಿನ್ನಾಭರಣ ಕದ್ದು ಆಕೆಯೊಂದಿಗೆ ಓಡಿ ಹೋಗಿದ್ದಾನೆ.ಶಿಕ್ಷಕಿಯ ನಡತೆ ಸರಿಯಾಗಿಲ್ಲ. ನಮ್ಮ ಪುತ್ರನನ್ನು ಪ್ರೇಮಪಾಶದಲ್ಲಿ ಸಿಲುಕಿಸಿಕೊಂಡು ಕಳ್ಳತನ ಮಾಡಲು ಪ್ರೇರೇಪಿಸಿದ್ದಾಳೆ ಎಂದು ಬಾಲಕನ ತಂದೆ ರಾಮವೀರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
 
ಫರೀದಾಪುರ್‌ನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಮವೀರ್, ಪುತ್ರ ಕಾಣೆಯಾದಾಗಿನಿಂದ ಆತನ ಹುಡುಕಾಟದಲ್ಲಿ ತೊಡಗಿದ್ದೇನೆ. ಆದರೆ, ಪುತ್ರ ಪತ್ತೆಯಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 
 
ಏತನ್ಮಧ್ಯೆ, ಬಾಲಕನ ಪೋಷಕರು ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಪುತ್ರ ಕಾಣೆಯಾಗಿರುವ ಬಗ್ಗೆ ಸಂಚು ರೂಪಿಸುತ್ತಿದ್ದಾರೆ ಎಂದು ಬಾಲಕನೊಂದಿಗೆ ಓಡಿ ಹೋದ ಶಿಕ್ಷಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
 
14 ವರ್ಷದ ಬಾಲಕ ಮತ್ತು 22 ವರ್ಷ ವಯಸ್ಸಿನ ಶಿಕ್ಷಕಿ ಇಬ್ಬರು ಅನೈತಿಕ ಸಂಬಂಧ ಹೊಂದಿರಬಹುದು ಎನ್ನುವ ಶಂಕೆ ಕಾಡುತ್ತಿದೆ. ಇಬ್ಬರ ಪತ್ತೆಗಾಗಿ ಜಾಲ ಬೀಸಲಾಗಿದೆ. ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ