ಮುಸ್ಲಿಂ ಯುವಕನ ಶವಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಮಾಡಿದ್ದಕ್ಕೆ ಕೆಲಸದಿಂದ ಅಮಾನತು

ಶುಕ್ರವಾರ, 24 ಏಪ್ರಿಲ್ 2015 (12:33 IST)
ಮುಸ್ಲಿಂ ಯುವಕನ ಶವಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಮಾಡಿದ್ದ ಕಾರಣಕ್ಕೆ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾದ ಘಟನೆ ಘಾಜಿಯಾಬಾದ್‌ನಲ್ಲಿ ನಡೆದಿದೆ. 

ಲೋನಿ ಕಸ್ಬಾ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇನ್ಸಪೆಕ್ಟರ್ ಕೃಷ್ಣನ್ ಬಲ್ದೇವ್ ಯಾದವ್ ಅವರನ್ನು ಘಾಜಿಯಾಬಾದ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಧರ್ಮೇಂದ್ರ ಯಾದವ್ ಅಮಾನತುಗೊಳಿಸಿದ್ದಾರೆ ಎಂದು ರಾಷ್ಟ್ರೀಯ ದಿನಪತ್ರಿಕೆಯೊಂದರ ವರದಿ ಹೇಳುತ್ತದೆ. 
 
ಮೃತ ಯುವಕ ಸಲೀಂ ಕುಟುಂಬಸ್ಥರು ಹೇಳುವ ಪ್ರಕಾರ ಎಪ್ರಿಲ್ 18 ರಂದು ಸಲೀಂ ದೇಹ ತಲೆ ಮತ್ತು ಕೈ ಕತ್ತರಿಸಿದ ಸ್ಥಿತಿಯಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಗಿತ್ತು. ಆದರೆ ಮೃತ ಶವದ ಕುಟುಂಬಸ್ಥರು ಯಾರೆಂದು ತಿಳಿಯದ ಕಾರಣ ಎಸ್ಐ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಸಂಸ್ಕಾರವನ್ನು ನಡೆಸಿದ್ದರು.
 
ಆದರೆ ಆತ ಮುಸ್ಲಿ ಯುವಕ ಎಂದು ತಿಳಿದು ಸಹ ಆತನ ದೇಹವನ್ನು ಹೂಳುವ ಬದಲು ಸುಡಲಾಗಿತ್ತು ಎಂದು ಮೃತನ ಕುಟುಂಬದ ಸದಸ್ಯರು ದೂರಿದ್ದರು.

ವೆಬ್ದುನಿಯಾವನ್ನು ಓದಿ