ನೇತಾಜಿ ಸುಭಾಶ್ ಚಂದ್ರ ಭೋಸ್ ಬಳಸುತ್ತಿದ್ದ ಕಾರು ಗೋಡೌನ್‌ನಲ್ಲಿ ಪತ್ತೆ

ಶನಿವಾರ, 26 ಜುಲೈ 2014 (15:10 IST)
ದೇಶದ ಸ್ವಾತಂತ್ರ್ಯಹೋರಾಟಗಾರರಲ್ಲಿ ಮುಂಚೂಣಿಯಲ್ಲಿದ್ದ ವೇತಾಜಿ ಸುಭಾಶ್ ಚಂದ್ರ ಭೋಸ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.   
 
1930 ರಿಂದ 1941 ರವರೆಗೆ ಜಾರ್ಖಂಡ್‌ನ ಹಲವಾರು ಪ್ರದೇಶಗಳಿಗೆ ಭೇಟಿ ನೀಡಲು ನೇತಾಜಿ ಸುಭಾಶ್ ಚಂದ್ರ ಭೋಸ್ ಬಳಸುತ್ತಿದ್ದ 90 ವರ್ಷ ಹಳೆಯದಾದ ಬೇಬಿ ಆಸ್ಟಿನ್ ಮಾಡೆಲ್ ಕಾರು, ಇತ್ತೀಚೆಗೆ ಧನಾಬಾದ್‌ನ ಬರಾನಿ ಕೋಕ್ ಪ್ಲಾಂಟ್‌ ವೇರ್‌ಹೌಸ್‌ನಲ್ಲಿ ಪತ್ತೆಯಾಗಿದೆ   
 
ಮಾಧ್ಯಮ ವರದಿಗಳ ಪ್ರಕಾರ, ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ತಪಸ್ ಕುಮಾರ್ ಲಹರಿ, ಕಂಪೆನಿಯ ಪ್ರಧಾನ ವ್ಯವಸ್ಥಾಪಕರಿಗೆ ವೇರ್‌ಹೌಸ್‌ನಲ್ಲಿರುವ ಕಾರನ್ನು ಜಿಲ್ಲಾ ಅಡಳಿತಕ್ಕೆ ಒಪ್ಪಿಸುವಂತೆ ಆದೇಶಿಸಿದ್ದರು. 
 
ಸುಭಾಶ್ ಚಂದ್ರ ಭೋಸ್ ಬಳಸುತ್ತಿದ್ದ ಬೇಬಿ ಆಸ್ಟಿನ್ ಮಾಡೆಲ್ ಕಾರಿನ ಮಾಲೀಕತ್ವವನ್ನು ಅವರ ಚಿಕ್ಕಪ್ಪ ಅಶೋಕ್ ಭೋಸ್ ಹೆಸರಲ್ಲಿತ್ತು. ನಂತರ ಈಸ್ಟ್ ಇಂಡಿಯಾ ಕಂಪೆನಿ ಭಾರತ್ ಕೋಕ್‌ ಪ್ಲಾಂಟ್‌ ಉಸ್ತುವಾರಿಗೆ ಒಪ್ಪಿಸಿತ್ತು.    
 
 

ವೆಬ್ದುನಿಯಾವನ್ನು ಓದಿ