ಮೋದಿ ಸರಕಾರ ಹೊಸ ಚೀನಾ ನೀತಿ ಜಾರಿಗೆ ತರಲಿ: ಸುಬ್ರಹ್ಮಣ್ಯಂ ಸ್ವಾಮಿ

ಸೋಮವಾರ, 29 ಜೂನ್ 2015 (18:37 IST)
ನಾವು ಕಾಂಗ್ರೆಸ್ ಪಕ್ಷದ ಹಳೆಯದಾದ ಚೀನಾ ನೀತಿಗಳನ್ನು ಪಾಲಿಸುತ್ತಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ಚೀನಾ ನೀತಿಗಳನ್ನು ರೂಪಿಸುವಂತಾಗಲು ತಜ್ಞರ ಸಭೆ ಕರೆಯಬೇಕು. ಇದರಿಂದ ನಮ್ಮ ಸಾಮರ್ಥ್ಯ, ದುರ್ಬಲತೆ ಮತ್ತು ಅವಕಾಶಗಳ ಅನಾವರಣವಾಗುತ್ತದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.
    
ಬಿಜೆಪಿ ಸರಕಾರ ಕಾಂಗ್ರೆಸ್ ಪಕ್ಷದ ಹಳೆಯ ಚೀನಾ ನೀತಿಯನ್ನು ಅನುಸರಿಸುತ್ತಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಲಕ್ವಿಯನ್ನು ಬೆಂಬಲಿಸಿದ ಚೀನಾ, ಭಾರತ ದೇಶಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ ಎಂದು ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. 
 
ಪ್ರಸ್ತುತವಿರುವ ಚೀನಾ ನೀತಿಗಳು ಸ್ಪಷ್ಟತೆಯನ್ನು ಹೊಂದಿಲ್ಲ. ಹೊಸತಾದ ಚೀನಾ ನೀತಿಗಳನ್ನು ಜಾರಿಗೆ ತರುವಂತಾಗಬೇಕು ಎಂದು ವರ್ಲ್ಡ್ ಪೀಸ್ ಫೋರಂ ಕಾನ್ಫ್‌ರೆನ್ಸ್ 2015 ಸಭೆಯಲ್ಲಿ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
 
ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕಿಸ್ತಾನದ ಉಗ್ರ ಲಖ್ವಿ ವಿರುದ್ಧ ಚೀನಾ ಬೆಂಬಲಿಸಿದೆ ಎಂದು ಸುದ್ದಿ ತಿಳಿದಾಗ ನನಗೆ ಆಘಾತವಾಯಿತು. ನಮಗೆ ಅದು ರೆಡ್ ಸಿಗ್ನಲ್ ಎಂದು ಭಾವಿಸಲೇ ಇಲ್ಲ. ನಮ್ಮನ್ನು ನಾವು ರಕ್ಷಣೆ ಮಾಡುವಂತಹ ವಾತಾವರಣ ಸೃಷ್ಟಿಸಬೇಕು ಎಂದರು. 
 
ಚೀನಾದ ಅಧ್ಯಕ್ಷ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿರುವುದು, ಮೋದಿ ಚೀನಾಕ್ಕೆ ಭೇಟಿ ನೀಡಿದ್ದರಿಂದ ಮಹತ್ವದ ಸಾಧನೆಯಾಗಿಲ್ಲ. ಕೇವಲ ಚೀನಾದ ಖಾಸಗಿ ಕ್ಷೇತ್ರದ ಕಂಪೆನಿಗಳಉ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಸಮ್ಮತಿ ಮಾತ್ರ ಸೂಚಿಸಿವೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ