ಕೇಜ್ರಿವಾಲ್, ಸಿಸೋಡಿಯಾ ವಿರುದ್ಧ ಮೊಕದ್ದಮೆ ದಾಖಲಿಸಲು ಎಲ್‌ಜಿ ಅನುಮತಿ ಕೇಳಿದ ಸ್ವಾಮಿ

ಗುರುವಾರ, 28 ಜನವರಿ 2016 (17:40 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೆ ತೊಡೆ ತಟ್ಟಿದ್ದಾರೆ. ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಪತ್ರ ಮುಖೇನ ಅವರು ಮನವಿ ಸಲ್ಲಿಸಿದ್ದಾರೆ.
 
ಆಪ್ ಸರ್ಕಾರ ಈ ಮೊದಲು 49 ದಿನಗಳ ಕಾಲ ಆಳ್ವಿಕೆ ನಡೆಸಿದ ಸಂದರ್ಭದಲ್ಲಿ ಸಿಎಂ ಕೇಜ್ರಿವಾಲ್ ಮತ್ತು ಸಚಿವ ಸಿಸೋಡಿಯಾ ಎಸ್‌ಕೆಎನ್ ಅಸೋಸಿಯೇಟ್ಸ್ ಲಿ. ಕಂಪನಿಗೆ ಅಕ್ರಮವಾಗಿ ಸಹಾಯ ಮಾಡಿದ್ದರು ಎಂದು ಸ್ವಾಮಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
 
ವ್ಯಾಟ್ ವಂಚಕರ ಪಟ್ಟಿಯಲ್ಲಿ ಈ ಕಂಪನಿ ಹೆಸರು ಕೂಡ ಇದ್ದು, ದೆಹಲಿ ಸರ್ಕಾರದೊಂದಿಗೆ ದೀರ್ಘಕಾಲದಿಂದ ದೆಹಲಿ ಸರ್ಕಾರದ ಜತೆ ವಿದ್ಯುತ್ ಸರಬರಾಜು , ಹವಾನಿಯಂತ್ರಿತ , ಎಲ್ಪಿಜಿ ಮತ್ತು ಸಿಎನ್‌ಜಿ ವಸ್ತುಗಳ ಗುತ್ತಿಗೆ ಸೇರಿದಂತೆ ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಅವರು ದೂರಿದ್ದಾರೆ. 

ವೆಬ್ದುನಿಯಾವನ್ನು ಓದಿ