ಸುನಂದಾ ಪುಷ್ಕರ್ ಪ್ರಕರಣ: ಸದ್ಯದಲ್ಲೇ ತರೂರ್‌ಗೆ ಸುಳ್ಳುಪತ್ತೆ ಪರೀಕ್ಷೆ

ಸೋಮವಾರ, 1 ಫೆಬ್ರವರಿ 2016 (14:16 IST)
ಕಾಂಗ್ರೆಸ್ ನಾಯಕ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತರೂರ್ ಮನೆಗೆಲಸದವರಾದ ನಾರಾಯಣ್ ಸಿಂಗ್ ಮತ್ತು ಚಾಲಕ ಬಜರಂಗಿಯವರನ್ನು ದೆಹಲಿ ಪೊಲೀಸರು ಪುನಃ ವಿಚಾರಣೆಗೊಳಪಡಿಸಿದ್ದಾರೆ. ತರೂರ್ ಅವರನ್ನು ಸಹ ಸದ್ಯದಲ್ಲಿಯೇ ವಿಚಾರಣೆಗೊಳಪಡಿಸಲಿರುವ ಹೊಸ ತನಿಖಾ ತಂಡ ಅವರಿಗೆ ಸುಳ್ಳು ಪತ್ತೆ ಪರೀಕ್ಷೆ ಮಾಡುವ ಸಾಧ್ಯತೆ ಕೂಡ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಸುನಂದಾ ಪುಷ್ಕರ್‌ ಅವರ ಸಾವಿಗೆ ಅಲ್‌ಪ್ರಾಕ್ಸ್‌ ಮಾತ್ರೆಗಳಲ್ಲಿನ ವಿಷಕಾರಿ ಅಂಶಗಳೇ ಕಾರಣವೆಂಬುದನ್ನು ವೈದ್ಯಕೀಯ ಪರೀಕ್ಷಾ ವರದಿ ದೃಢಪಡಿಸಿತ್ತು.
ಜತೆಗೆ ಅವರು ಶವವಾಗಿ ಕಂಡುಬಂದ ಕೋಣೆಯಲ್ಲಿ ಅಲ್‌ಪ್ರಾಕ್ಸ್‌ ಮಾತ್ರೆಗಳು ಸಿಕ್ಕಿದ್ದವು. ಈ ಮಾತ್ರೆಗಳ ಬ್ಯಾಚ್‌ ಸಂಖ್ಯೆ ಇತ್ಯಾದಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮಾರಿದವರು ಯಾರೆಂದು ಸಲುವಾಗಿ ದಿಲ್ಲಿಯ ಲೋಧಿ ಕಾಲನಿ ಪ್ರದೇಶದಲ್ಲಿರುವ ಕೆಲವು ಔಷಧದ ಅಂಗಡಿಗಳ ಮಾಲೀಕರು ಮತ್ತು ಕೆಲಸದವರನ್ನು ತನಿಖಾಧಿಕಾರಿಗಳು  ಪ್ರಶ್ನಿಸುತ್ತಿದ್ದಾರೆ. 
 
ಏಮ್ಸ್ ಆಸ್ಪತ್ರೆಯ ವರದಿ ಪುಷ್ಕರ್ ಅವರ ಸಾವು ವಿಷಪ್ರಾಶನದಿಂದ ಆಗಿದೆ ಎಂದು ವರದಿ ನೀಡಿದ ಬಳಿಕ ದೆಹಲಿ ಪೊಲೀಸರು ಕಳೆದ ಜನವರಿ ತಿಂಗಳಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಜತೆಗೆ ಅವರ ಅಂಗಾಂಗಗಳ ಮಾದರಿಯನ್ನು ಅಮೇರಿಕಾದ ಎಫ್‌ಬಿಐ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ಪ್ರಯೋಗಾಲಯದ ವರದಿ ಪೊಲೀಸರ ಕೈ ಸೇರಿದೆ.
 
2010ರಲ್ಲಿ ತರೂರ್ ಅವರನ್ನು ವಿವಾಹವಾಗಿದ್ದ ಪುಷ್ಕರ್ ದೆಹಲಿಯ ಜನವರಿ 14, 2014ರಲ್ಲಿ ದೆಹಲಿಯ ಲೀಲಾ ಪ್ಯಾಲೇಸ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.

ವೆಬ್ದುನಿಯಾವನ್ನು ಓದಿ