ಕಾಂಡೋಮ್ ಜಾಹೀರಾತು ವಿವಾದಕ್ಕೆ ಸನ್ನಿ ಪ್ರತಿಕ್ರಿಯಿಸಿದ್ದು ಹೀಗೆ!

ಶುಕ್ರವಾರ, 4 ಸೆಪ್ಟಂಬರ್ 2015 (13:11 IST)
ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ತಮ್ಮ ವಿರುದ್ಧ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ. ತಾವು ಅಭಿನಯಿಸಿರುವ ಕಾಂಡೋಮ್ ಜಾಹೀರಾತಿನ ಬಗ್ಗೆ ಸಿಪಿಐನ ಹಿರಿಯ ರಾಜಕಾರಣಿ ಅತುಲ್ ಕುಮಾರ್ ನೀಡಿರುವ ಹೇಳಿಕೆಯ ಬಗ್ಗೆ ಕೊನೆಗೂ ಮೌನ ಮುರಿದಿರುವ ಸನ್ನಿ ವಿವಾದದ ಕುರಿತು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

'ಅಧಿಕಾರದಲ್ಲಿ, ರಾಜಕಾರಣದಲ್ಲಿರುವವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರ ಕಡೆ ಗಮನ ಹರಿಸುವುದನ್ನು ಬಿಟ್ಟು  ನನ್ನ ಮೇಲೆ ತಮ್ಮ ಸಮಯ ಮತ್ತು ಶಕ್ತಿ ವ್ಯರ್ಥ ಮಾಡುತ್ತಿರುವುದು ವಿಷಾದನೀಯ', ಎಂದು ಸನ್ನಿ ಲಿಯೋನ್ ಟ್ವಿಟ್ ಮಾಡಿದ್ದಾಳೆ.
 
ನೀಲಿ ಚಿತ್ರ ತಾರೆ ಸನ್ನಿ ಲಿಯೋನ್‌ ಅಭಿನಯಿಸಿರುವ ಕಾಂಡೋಮ್ ಜಾಹಿರಾತಿನ ಪರಿಣಾಮ ಭಾರತದಲ್ಲಿ ಅತ್ಯಾಚಾರದ ಪ್ರಕರಣಗಳಲ್ಲಿ ಏರಿಕೆಯಾಗಿದೆ  ಎಂದು ಹೇಳುವುದರ ಮೂಲಕ  ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಅತುಲ್ ಕುಮಾರ್ ಅಂಜನ್ ವಿವಾದವನ್ನು ಪ್ರಾರಂಭಿಸಿದ್ದರು.
 
ಗಾಜಿಪುರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಪಿಎಂ ನಾಯಕ, 'ಸನ್ನಿ ಲಿಯೋನ್ ಎಂಬ ಹೆಸರಿನ ಮಹಿಳೆಯಿದ್ದಾಳೆ. ನಗ್ನ ಸಿನಿಮಾಗಳ ನಾಯಕಿಯಾಗಿರುವ ಆಕೆ ಅಭಿನಯಿಸಿದ ಕಾಂಡೋಮ್ ಜಾಹೀರಾತೊಂದು ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಅದು ಉದ್ರೇಕಕಾರಿಯಾಗಿದೆ. ಈ ರೀತಿಯ ಜಾಹೀರಾತನ್ನು ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಿದರೆ, ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಲಿವೆ. ಈ ಕಾಂಡೋಮ್ ಜಾಹೀರಾತು ಲೈಂಗಿಕತೆಯನ್ನು ಉದ್ರೇಕಿಸುತ್ತದೆ. ನಾನು ನನ್ನ ಜೀವಮಾನದಲ್ಲಿ ಒಂದೇ ಒಂದು ನೀಲಿಚಿತ್ರವನ್ನು ನೋಡಿಲ್ಲ. ಆದರೆ ಈ ಜಾಹೀರಾತು ನೋಡಿ ಎರಡು ನಿಮಿಷದಲ್ಲಿಯೇ ವಾಂತಿ ಬರುವಂತಾಯಿತು. ಅಷ್ಟು ಕೆಟ್ಟದಾಗಿತ್ತು. ಸನ್ನಿ ಲಿಯೋನ್‍ನಿಂದ ಜನ ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ', ಎಂದು ಸಿಪಿಐ ನಾಯಕ ಅತುಲ್ ಕುಮಾರ್ ಹೇಳಿದ್ದರು.
 
ಇದಕ್ಕೆ ಪೂರಕವಾಗಿ 'ಜಾಹೀರಾತಿನಲ್ಲಿ ಬರುತ್ತಿರುವುದು ಅನೈತಿಕವಾಗಿದೆ. ಇದನ್ನು ಕೂಡಲೇ ಸರ್ಕಾರ ನಿಷೇಧ ಮಾಡಬೇಕು', ಎಂದು ದೆಹಲಿಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಬರ್ಖಾ ಶುಕ್ಲಾ ಸಿಂಗ್ ಒತ್ತಾಯಿಸಿದ್ದರು.
 
ಅತುಲ್ ಅವರು ಮಾತನಾಡಿರುವ ಭಾಷಣದ ವಿಡಿಯೋ ಕ್ಲಿಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಚಿವರ ವಿಲಕ್ಷಣ ಹೇಳಿಕೆಗೆ ಟೀಕೆಗಳ ಮಹಾಪೂರ ಹರಿದು ಬಂದಿದೆ. ಜತೆಗೆ ಹಲವರು ಸಿಪಿಐ ಮುಖಂಡನ ಅಭಿಪ್ರಾಯಕ್ಕೆ  ಸಹಮತವನ್ನೂ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ