ಎನ್‌ಕೌಂಟರ್‌ಗೆ ಸುಪ್ರೀಂಕೋರ್ಟ್ ಹೊಸ ಮಾರ್ಗಸೂಚಿ

ಮಂಗಳವಾರ, 23 ಸೆಪ್ಟಂಬರ್ 2014 (12:13 IST)
ಎನ್‌ಕೌಂಟರ್‌ಗೆ ಸುಪ್ರೀಂಕೋರ್ಟ್ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಎನ್‍‌ಕೌಂಟರ್ ಲಿಸ್ಟ್‌ನಲ್ಲಿರುವ ಕ್ರಿಮಿನಲ್‌ಗಳ  ಪಟ್ಟಿಯನ್ನು ಮೊದಲೇ ಬಿಡುಗಡೆ ಮಾಡಬೇಕು. ಎನ್‌ಕೌಂಟರ್ ನಡೆಸಿದ ಕೂಡಲೇ ಶಸ್ತ್ರ ಮತ್ತು ಮದ್ದುಗುಂಡುಗಳನ್ನು ಒಪ್ಪಿಸಬೇಕು. ಎನ್‌ಕೌಂಟರ್ ನಡೆದ ಪ್ರಕರಣವನ್ನು ಕಡ್ಡಾಯವಾಗಿ ದಾಖಲಿಸಬೇಕು.

ಎನ್‌ಕೌಂಟರ್‌ನಲ್ಲಿ ಪಾಲ್ಗೊಂಡ ಅಧಿಕಾರಿಗೆ ಕೂಡಲೇ  ಯಾವುದೇ ಹುದ್ದೆಯಲ್ಲಿ ಬಡ್ತಿ, ಪ್ರಶಸ್ತಿ ನೀಡಬಾರದು, ಎನ್‌ಕೌಂಟರ್ ಸ್ವತಂತ್ರ ತನಿಖೆಯನ್ನು ರಾಜ್ಯ ಸಿಐಡಿ, ಪ್ರತ್ಯೇಕ ಪೊಲೀಸರ ತಂಡವೇ ನಡೆಸಬೇಕು. ಸಿಆರ್‌ಪಿಸಿ ಸೆಕ್ಷನ್ 176 ರ ಅಡಿಯಲ್ಲಿ ಮ್ಯಾಜಿಸ್ಟೇರಿಯಲ್ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್  ತಿಳಿಸಿದೆ.

ಕೆಲವು ನಕಲಿ ಎನ್‌ಕೌಂಟರ್‌ಗಳ ಹಾವಳಿಯನ್ನು ತಪ್ಪಿಸಲು ಸುಪ್ರೀಂಕೋರ್ಟ್ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 

ವೆಬ್ದುನಿಯಾವನ್ನು ಓದಿ