ಜಯಲಲಿತಾಗೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್

ಸೋಮವಾರ, 27 ಜುಲೈ 2015 (18:32 IST)
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಉತ್ತರಿಸುವಂತೆ  ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಇತರ ಮೂವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. 

ನ್ಯಾಯಮೂರ್ತಿಗಳಾದ ಪಿಸಿ ಘೋಷ್ ಮತ್ತು ಆರ್.ಕೆ. ಅಗರ್ವಾಲ್ ಒಳಗೊಂಡ ಪೀಠ ಜಯಲಲಿತಾ, ಅವರ ಆಪ್ತೆ ಶಶಿಕಲಾ ಮತ್ತು ಅವರ ಸಂಬಂಧಿಗಳಾದ   ವಿ. ಎನ್. ಸುಧಾಕರನ್ ಮತ್ತು ಇಳವರಸಿ ಅವರಿಗೆ ನೊಟೀಸ್ ಜಾರಿ ಎಂಟು ವಾರಗಳೊಳಗೆ ಪ್ರತ್ಯುತ್ತರಗಳನ್ನು ನೀಡುವಂತೆ ಆದೇಶಿಸಿದೆ. 
 
ಕೆಲ ಹಂತದ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ವಜಾಗೊಳಿಸಿ ಎಐಡಿಎಂಕೆ ನಾಯಕಿ ಮತ್ತು ಇತರ ಮೂವರನ್ನು ನಿರಪರಾಧಿಗಳೆಂದು ಕರ್ನಾಟಕ ಹೈಕೋರ್ಟ್ ಕಳೆದ ಮೇ 11 ರಂದು ಬಿಡುಗಡೆ ಮಾಡಿತ್ತು. ಹೀಗಾಗಿ ಕಳೆದುಕೊಂಡಿದ್ದ ಮುಖ್ಯಮಂತ್ರಿ ಸ್ಥಾನವನ್ನು ಜಯಾ ಮರಳಿ ಪಡೆದಿದ್ದರು. 
 
ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ  ಸಲ್ಲಿಸಿತ್ತು. 

ವೆಬ್ದುನಿಯಾವನ್ನು ಓದಿ