ಪ್ರಜಾವತಿ ಬಂಧನ ತಡೆಗೆ ಸುಪ್ರೀಂ ನಕಾರ

ಸೋಮವಾರ, 6 ಮಾರ್ಚ್ 2017 (14:04 IST)
ಅತ್ಯಾಚಾರ ಆರೋಪದಡಿ ಬಂಧನ ಭೀತಿ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಉತ್ತರಪ್ರದೇಶದ ಸಚಿವ ಗಾಯತ್ರಿ ಪ್ರಜಾಪತಿ ಬಂಧನಕ್ಕೆ ತಡೆನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
 

ಅತ್ಯಾಚಾರ ಆರೋಪದಡಿ ಫೆಬ್ರವರಿ 27ರಂದು ಎಫ್ಐಆರ್ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಪ್ರಜಾಪತಿ ಬಂಧನಕ್ಕೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದರು.

ಸಚಿವರ ವಿರುದ್ಧ ಕೇವಲ ಎಫೈಆರ್ ದಾಖಲಿಸಲು ಮಾತ್ರವೇ ಸೂಚಿಸಲಾಗಿದೆಯೇ..? ಬಂಧನದ ವಿಚಾರವನ್ನ ಪೊಲೀಸರ ವಿವೇಚನೆಗೆ ಬಿಟ್ಟದ್ದೇ ಎಂಬ ಬಗ್ಗೆ ಕೆಳ ನ್ಯಾಯಾಲಯದಲ್ಲೇ ವಿವರಣೆ ಪಡೆಯುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

ಒಂದು ಪಕ್ಷ ಸಚಿವರ ವಿರುದ್ಧ ಜಾಮೀನು ರಹಿತ ವಾರೆಂಟ್ ಇದ್ದರೆ ಕಾನೂನು ತನ್ನ ಕೆಲಸವನ್ನ ಮಾಡಲಿದೆ. ಅವರು ಬಂಧನವಾದರೆ ಕೆಳನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದಿರುವ ಕೋರ್ಟ್, ಪ್ರಜಾಪತಿ ಪ್ರಕರಣ ರಾಜಕೀಯ ಬಣ್ಣ ಪಡೆದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದೆ.




ವೆಬ್ದುನಿಯಾವನ್ನು ಓದಿ