ಇಂಡಿಯಾ ಬದಲು ''ಭಾರತ': ಪುನರ್ ನಾಮಕರಣಕ್ಕೆ ಸರಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಶನಿವಾರ, 25 ಏಪ್ರಿಲ್ 2015 (16:45 IST)
ನಮ್ಮ ದೇಶವನ್ನು ಇಂಡಿಯಾ ಬದಲು ಭಾರತವೆಂದು ಕರೆಯಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಕೋರ್ಟ್ ಈ ಕುರಿತು ಅಭಿಪ್ರಾಯವನ್ನು ತಿಳಿಸುವಂತೆ ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳ ಸರಕಾರಕ್ಕೆ ತಿಳಿಸಿದೆ. 

ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ನಿರಂಜನ್ ಭಟ್ವಾಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ಪೀಠ, ಈ ಕುರಿತು ತೀರ್ಮಾನ ಕೈಗೊಳ್ಳುವ ಮುನ್ನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಭಿಪ್ರಾಯವನ್ನು ಪಡೆದುಕೊಳ್ಳಲು ಬಯಸಿದ್ದು, ಸರಕಾರಗಳಿಗೆ ನೋಟಿಸ್ ಕಳುಹಿಸಿದೆ. 
 
ಅರ್ಜಿದಾರರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲರಾದ ಅಜಯ್ ಜಿ ಮಜಿಥಿಯ ಮತ್ತು ರಾಹುಲ್ ಪಾಂಡೆ, ಇಂಡಿಯಾ ಪದ 'ಭಾರತ' ಪದದ ಅಕ್ಷರಶಃ ಅನುವಾದವಲ್ಲ. ಐತಿಹಾಸಿಕವಾಗಿ ಮತ್ತು ಗ್ರಾಂಥಿಕವಾಗಿ ನಮ್ಮ ದೇಶದ ಹೆಸರು ಭಾರತ ಎಂದು ವಾದಿಸಿದ್ದಾರೆ. 
 
ಇಂಡಿಯಾ ಎಂಬ ಹೆಸರು ವಸಾಹತು ಕಾಲದಲ್ಲಿ ಬಳಕೆಗೆ ಬಂದಿದ್ದು ಎಂದು ಅರ್ಜಿಯಲ್ಲಿ ಹೇಳಲಾಗಿದೆ. 
 
ಸಂವಿಧಾನ ರಚನಾ ಸಭೆಯು ದೇಶಕ್ಕೆ ಭಾರತ, ಹಿಂದೂಸ್ತಾನ, ಭಾರತ್‌ ಭೂಮಿ, ಭರತ ವರ್ಷ,ಇತ್ಯಾದಿ ಹೆಸರು ಇಡುವಂತೆ ಸಲಹೆ ನೀಡಿತ್ತು ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ