ಸೆಕ್ಸನ್ 499 ಸಂವಿಧಾನಬದ್ಧ ಎಂದ ಸುಪ್ರೀಂ

ಶುಕ್ರವಾರ, 13 ಮೇ 2016 (12:50 IST)
ಐಪಿಸಿ ಸೆಕ್ಸನ್ 499 ರದ್ದುಗೊಳಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ.
 
ಕ್ರಿಮಿನಲ್ ಮಾನನಷ್ಟಕ್ಕೆ ಅವಕಾಶ ಕಲ್ಪಿಸಿರುವ ಭಾರತೀಯ ದಂಡ ಸಂಹಿತೆಯ 499 ಮತ್ತು 500ನೇ ವಿಧಿಗಳುಅಸಂವಿಧಾನಿಕ. ಅದನ್ನು ರದ್ದುಗೊಳಿಸಬೇಕು. ಅದನ್ನು ಕ್ರಿಮಿನಲ್ ಬದಲಾಗಿ ಸಿವಿಲ್ ಎಂದು ಪರಿಗಣಿಸಬೇಕು ಎಂದು  ರಾಹುಲ್ ಗಾಂಧಿ,ಅರವಿಂದ ಕೇಜ್ರಿವಾಲ್ ಮತ್ತು ಸುಬ್ರಮಣಿಯನ್ ಸ್ವಾಮಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 
 
ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಐಪಿಸಿ ಸೆಕ್ಸನ್ 499, 500 ಸಂವಿಧಾನಬದ್ಧ . ಮಾನನಷ್ಟ ಮೊಕದ್ದಮೆ ಕ್ರಿಮಿನಲ್ ಕೇಸ್ ಆಗಿಯೇ ಉಳಿಯುತ್ತವೆ. ಅವನ್ನು ಕೇವಲ ಸಿವಿಲ್ ಎಂದು ಪರಿಗಣಿಸಲಾಗದು ಎಂದು ಹೇಳಿದೆ.
 
ಜತೆಗೆ ಈ ಕೇಸ್‌ಗಳ ವಿಚಾರಣೆ ನಡೆಸುವಾಗ ಎಚ್ಚರಿಕೆ ಇರಲಿ ಎಂದು ಕೆಳ ಹಂತದ ಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ. 

ವೆಬ್ದುನಿಯಾವನ್ನು ಓದಿ