ಜಯಲಲಿತಾ ಜಾಮೀನು ಅವಧಿಯನ್ನು ನಾಲ್ಕು ತಿಂಗಳಿಗೆ ವಿಸ್ತರಿಸಿದ ಸುಪ್ರೀಂ

ಗುರುವಾರ, 18 ಡಿಸೆಂಬರ್ 2014 (13:12 IST)
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ಇಂದು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ಅವರ ಜಾಮೀನು ಅವಧಿಯನ್ನು ಮುಂದಿನ ನಾಲ್ಕು ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಿದೆ.
 
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಹೆಚ್.ಎಲ್.ದತ್ತು ಅವರಿದ್ದ ಏಕ ಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದ್ದು, ಜಯ ನೀಡಿರುವ ಎಲ್ಲಾ ಮಾಹಿತಿಗಳನ್ನೂ ಕೂಡ ದೂರುದಾರರಿಗೂ ನೀಡುವಂತೆ ಹೈಕೋರ್ಟ್ ಸಿಜೆಗೆ ನಿರ್ದೇಶಿಸಿದೆ.    
 
ಇದೇ ವೇಳೆ ದೂರುದಾರ, ಬಿಜೆಪಿ ಮುಖಂಡ ಸುಬ್ರಮಣಿಯನ್ ಅವರಿಗೂ ಕೂಡ ಯಾವುದೇ ರೀತಿಯ ಬೆದರಿಕೆ ಅಥವಾ ಸಮಸ್ಯೆಗಳಿದ್ದಲ್ಲಿ ನಮ್ಮ ಬಳಿಗೆ ಬನ್ನಿ ಎಂದು ಕೋರ್ಟ್ ಸಲಹೆ ನೀಡಿದೆ.
 
ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆಯಲ್ಲಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಯಲಲಿತಾ ಅವರ ವಿಚಾರಣೆಯನ್ನು ನಡೆಸಿದ್ದ ಕರ್ನಾಟಕ ಹೈಕೋರ್ಟ್, ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ದಂಡ ವಿಧಿಸಿ ತೀರ್ಪು ನೀಡಿತ್ತು. ಅಲ್ಲದೆ ಜಾಮೀನಿಗೆ ನಿರಾಕರಿಸಿತ್ತು. ಆದ್ದರಿಂದ ಆರೋಪಿ ಜಯಲಲಿತಾ ಜಾಮೀನು ಕೋರಿ ಉನ್ನತ ನ್ಯಾಯಾಲಯ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದರು. ಬಳಿಕ ವಾದ ವಿವಾದಗಳನ್ನು ಆಲಿಸಿದ್ದ ನ್ಯಾಯಾಲಯ, 2 ತಿಂಗಳ ಅವಧಿಗೆ ಜಾಮೀನು ನೀಡಿತ್ತು. ಬಳಿಕ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಜಯಲಲಿತಾರ ಆಸ್ತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಪಡೆದು ಪರಿಶೀಲಿಸಿದ ನ್ಯಾಯಾಲಯ ಜಾಮೀನು ಅವಧಿಯನ್ನು ವಿಸ್ತರಿಸಿದೆ. 
 
ಈ ಪ್ರಕರಣವನ್ನು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣ್ಯಂ ಸ್ವಾಮಿ 1996ರಲ್ಲಿ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ, ಕಳೆದ ಸೆಪ್ಟಂಬರ್‌ ತಿಂಗಳಿನಲ್ಲಿ ಜಯಲಲಿತಾ ಅವರನ್ನು ಆರೋಪಿ ಎಂದು ತೀರ್ಪು ನೀಡುವ ಮೂಲಕ ಜೈಲಿಗೆ ಕಳುಹಿಸಿತ್ತು. ಪ್ರಕರಣದಲ್ಲಿ ಸುಧಾಕರನ್, ಆಪ್ತೆ ಶಶಿಕಲಾ , ಇಳವರಸಿ ಸೇರಿದಂತೆ ನಾಲ್ಕು ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು.  

ವೆಬ್ದುನಿಯಾವನ್ನು ಓದಿ