ದೀಪಾವಳಿ ಬೋನಸ್: ಎಲ್ಲಾ ನೌಕರರಿಗೆ ಕಾರ್ ಗಿಫ್ಟ್ ಕೊಟ್ಟ ವಜ್ರದ ವ್ಯಾಪಾರಿ

ಸೋಮವಾರ, 20 ಅಕ್ಟೋಬರ್ 2014 (15:22 IST)
ದೀಪಾವಳಿಗೆ ಖಾಸಗಿ ಕಂಪನಿಗಳು, ಕಚೇರಿಗಳು ಬೋನಸ್ ನೀಡುವುದು ಬಹುತೇಕ ಸಾಮಾನ್ಯ ಸಂಗತಿ. ಕೆಲವು ಸಂಸ್ಥೆಗಳು ದುಬಾರಿ ಉಡುಗೊರೆ ನೀಡಿದರೆ, ಕೆಲವರು ಸಣ್ಣಪುಟ್ಟ ಉಡುಗೊರೆ ನೀಡಿ ಸುಮ್ಮನಾಗಬಹುದು. ಇನ್ನು ಕೆಲವು ಕಂಪನಿಗಳು ಒಂದು ತಿಂಗಳ ಸಂಬಳವನ್ನೇ ನೀಡಬಹುದು. ಆದರೆ, ಸೂರತ್ ನಗರದ ವಜ್ರದ ವ್ಯಾಪಾರಿಯೊಬ್ಬರು ತಮ್ಮ ಕಂಪನಿಯ ನೌಕರರಿಗೆ ದೀಪಾವಳಿಗೆ ನೀಡಿರುವ ಬೋನಸ್ ಏನು ಗೊತ್ತೆ? ಹೊಚ್ಚ ಹೊಸ ಕಾರುಗಳನ್ನು ಅಂದರೆ ನಂಬುತ್ತೀರಾ?

ತನ್ನ ಕೈಕೆಳಗೆ ಕೆಲಸ ಮಾಡುವ ನೌಕರರು ಈ ವರ್ಷದ ಟಾರ್ಗೆಟ್ ಪೂರೈಸಿದ್ದಕ್ಕೆ ಪ್ರತಿಯಾಗಿ ಆತ ಬ್ರಾಂಡೆಂಡ್ ಕಾರ್‌ಗಳನ್ನೇ ಉಡುಗೊರೆಯಾಗಿ ನೀಡಿದ್ದಾನೆ. ಗುಜರಾತ್‌ನ ಸೂರತ್ ಜಿಲ್ಲೆ ವಜ್ರ ವ್ಯಾಪಾರದಲ್ಲಿ ಹಿಂದಿನಂತೆ ಅತ್ಯಂತ ವೈಭವೋಪೇತ ದಿನಗಳನ್ನೀಗ ಕಾಣದೇ ಇರಬಹುದು . ಆದರೆ ನಿಜವಾಗಿ ಕಠಿಣ ಪರಿಶ್ರಮ ವಹಿಸಿ  ಕೆಲಸ ಮಾಡುವವರಿಗೆ ಉಡುಗೊರೆ ನೀಡುವ ಪ್ರಕ್ರಿಯೆ ಮಾತ್ರ ಇನ್ನೂ ನಿಂತಿಲ್ಲ. 
 
ಕಾರ್ ಉಡುಗೊರೆ ಪಡೆದ ಹೆಚ್ಚಿನವರಿಗೆ ಡ್ರೈವಿಂಗ್ ಪರಿಚಯವೇ ಇಲ್ಲ. ಆದರೆ ಅವರ ಖುಷಿಗೆ ಎಣೆಯೇ ಇಲ್ಲ.  
 
ಈ ಕುರಿತು ಮಾತನಾಡಿದ ಕಂಪನಿಯ ಮಾಲೀಕ ಈ ಬಗ್ಗೆ ನಾವು ಕಳೆದ ವರ್ಷವೇ ನಿರ್ಧರಿಸಿದ್ದೆವು. ನೀಡಿದ್ದ ಗುರಿಯನ್ನು ಪೂರ್ಣಗೊಳಿಸಿದ 1, 200 ಉದ್ಯೋಗಿಗಳಿಗೆ ನಾವು ಕಾರ್ ನೀಡಿದ್ದೇವೆ ಎಂದಿದ್ದಾರೆ. 
 
ನನ್ನ ಮಾಲೀಕನಿಂದ ಉಡುಗೊರೆಯಾಗಿ ವಜ್ರಗಳ ಸ್ಟ್ರಿಂಗ್ ಸ್ವೀಕರಿಸಿದ್ದೇನೆ," ಎಂದು ಕಂಪನಿಯ ಉದ್ಯೋಗಿಯೊಬ್ಬರು ಹೇಳಿದರೆ, ಇಂತಹ ಮಾಲೀಕನನ್ನು ಹೊಂದಿರುವುದು ನನ್ನ ಅದೃಷ್ಟ , ನನಗೆ ಕಾರ್ ಉಡುಗೊರೆಯಾಗಿ ದೊರೆತಿದೆ ಎಂದು ಇನ್ನೊಬ್ಬ ಉದ್ಯೋಗಿ ಹರುಷ ವ್ಯಕ್ತಪಡಿಸುತ್ತಾನೆ. 

ವೆಬ್ದುನಿಯಾವನ್ನು ಓದಿ