ಕೋಳಿ ಉದ್ಯಮಿ ಎದುರು ಸೋತ ಸುಷ್ಮಾ ಸ್ವರಾಜ್ ಸಹೋದರಿ

ಸೋಮವಾರ, 20 ಅಕ್ಟೋಬರ್ 2014 (17:27 IST)
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಸಹೋದರಿ ವಂದನಾ ಶರ್ಮಾರವರನ್ನು ಬಿಜೆಪಿ ಒಂದು ತಿಂಗಳ ಹಿಂದೆ ಸಫಿಡಾನ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಅವರ ವಿಜಯ ಅತಿ ಸುಲಭ ಎಂದೇ ಭಾವಿಸಲಾಗಿತ್ತು. 

25 ರ ಪ್ರಾಯದಲ್ಲೇ ಅಂಬಾಲಾ ವಿಧಾನಸಭೆಯಲ್ಲಿ ಗೆದ್ದು ( 1977) ಅತಿ ಚಿಕ್ಕ ವಯಸ್ಸಿನ ಶಾಸಕಿ ಎನಿಸಿದ್ದ ಸುಷ್ಮಾ, ಪ್ರಧಾನಿ ನರೇಂದ್ರ ಮೋದಿಯವರ ಜತೆ ಅಮೇರಿಕಾ ಪ್ರವಾಸ ಮುಗಿಸಿ  ಹಿಂತಿರುಗಿದ ಕೂಡಲೇ ತಮ್ಮ ಸಹೋದರಿಗಾಗಿ ಚುನಾವಣಾ ಪ್ರಚಾರ ಮಾಡಲು ದೌಡಾಯಿಸಿದ್ದರು. ಸುಷ್ಮಾರ ಅನುಪಸ್ಥಿತಿಯಲ್ಲಿ ಅಂಬಾಲಾದ ನಿವಾಸಿಯಾಗಿರುವ, ವೃತ್ತಿಯಲ್ಲಿ ಆಯುರ್ವೇದಿಕ್ ವೈದ್ಯನಾಗಿರುವ ಅವರ ಸಹೋದರ ಗುಲ್ಸನ್ ತಮ್ಮ ಸಹೋದರಿಯ ರೋಡ್ ಶೋಗಳನ್ನು ನಿಭಾಯಿಸಿದ್ದರು. 
 
ಗೆಲುವು ನಿಶ್ಚಿತ ಎಂದುಕೊಂಡಿದ್ದ ಸುಷ್ಮಾ ಪರಿವಾರ ಭಾನುವಾರ ಬಂದ ಚುನಾವಣಾ ಫಲಿತಾಂಶದಲ್ಲಿ ವಂದನಾ ಸ್ವತಂತ್ರ ಅಭ್ಯರ್ಥಿಯಿಂದ ಸೋತಿರುವ ಸುದ್ದಿ ಕೇಳುತ್ತಲೆ ದಂಗಾಗಿ ಹೋಯಿತು. 400 ಕೋಟಿ ಮೌಲ್ಯದ ಕೋಳಿ ಫಾರ್ಮ ಹೊಂದಿರುವ ಜಸ್ಬೀರ್ ದೇಸ್ವಾಲ್ ವಂದನಾ ಗೆಲುವನ್ನು ಕಸಿದುಕೊಂಡಿದ್ದರು. ದೇಸ್ವಾಲ್  29, 369 ಮತಗಳನ್ನು ಪಡೆದಿದ್ದರೆ,  ವಂದನಾ 27, 947 ಮತಗಳನ್ನು ಪಡೆದಿದ್ದಾರೆ.
 
"ತಮ್ಮ ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಲು ಜನರಿಗೆ ಸಹಜವಾಗಿ ಸ್ಥಳೀಯರ ಅಗತ್ಯವಿರುತ್ತದೆ. ಹೊರಗಿನವರದಲ್ಲ. ನಾನು ಒಬ್ಬ ವಿಐಪಿ ಅಭ್ಯರ್ಥಿಯನ್ನು ಸೋಲಿಸಿದ್ದಕ್ಕೆ ಸಹಜವಾಗಿ ನನಗೆ ಥ್ರಿಲ್ ಆಗುತ್ತಿದೆ" ಎನ್ನುತ್ತಾರೆ ಆಹಾರ ಸಂಸ್ಕರಣೆ ಮಾಲೀಕರಾಗಿರುವ 64 ವರ್ಷದ ಸ್ವತಂತ್ರ ಅಭ್ಯರ್ಥಿ.

ವೆಬ್ದುನಿಯಾವನ್ನು ಓದಿ