ಪಾಕ್ ಮಾರಣಹೋಮ: ಸಂಸದರಿಗೆ ಆಯೋಜಿಸಿದ್ದ ಭೋಜನಕೂಟ ಕ್ಯಾನ್ಸಲ್ ಮಾಡಿದ ಸುಷ್ಮಾ ಸ್ವರಾಜ್

ಬುಧವಾರ, 17 ಡಿಸೆಂಬರ್ 2014 (18:02 IST)
ಪಾಕಿಸ್ತಾನದಲ್ಲಿ ಶಾಲಾ ಮಕ್ಕಳ ಮೇಲೆ ನಡೆದ ಉಗ್ರರ ರಾಕ್ಷಸಿ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ರಾತ್ರಿ ಸಂಸದರಿಗೆಂದು ಆಯೋಜಿಸಲಾಗಿದ್ದ  ರಾತ್ರಿ ಭೋಜನ ಕೂಟವನ್ನು ರದ್ದು ಮಾಡಿದ್ದಾರೆ.  
ಮಂಗಳವಾರ ಪಾಕ್‌ನ ಪೇಷಾವರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಸೇರಿದಂತೆ 160 ಜನ ಹತ್ಯೆಗೀಡಾಗಿದ್ದಾರೆ.
 
ಮುಗ್ಧ ಮಕ್ಕಳ ಮೇಲಿನ ಪೈಶಾಚಿಕ ಕೃತ್ಯದ ಹಿನ್ನೆಲೆಯಲ್ಲಿ ಇಂದು ಸಂಸದರಿಗೆಂದು ಆಯೋಜಿಸಲಾಗಿದ್ದ ರಾತ್ರಿ ಭೋಜನವನ್ನು ರದ್ದುಮಾಡಲಾಗಿದೆ ಎಂದು ಸ್ವರಾಜ್ ಟ್ವಿಟ್ ಮಾಡಿದ್ದಾರೆ. 
 
ಪಾಕ್ ಕಳೆದ 10 ವರ್ಷಗಳಲ್ಲಿ ಕಂಡ ಅತ್ಯಂತ ಭೀಕರ ರಕ್ತಪಾತದ ಘಟನೆ ಇದಾಗಿದ್ದು , 124 ಮಕ್ಕಳು ಸೇರಿದಂತೆ  160 ಮಕ್ಕಳು ತಾಲಿಬಾಲ್ ಉಗ್ರರ ಆತ್ಮಹತ್ಯಾ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. 
 
ಅರೆ ಸೇನಾಪಡೆ ಸಮವಸ್ತ್ರ ತೊಟ್ಟ, ಅರೇಬಿಕ್ ಮಾತನಾಡುತ್ತಿದ್ದ  8 ಜನ ಉಗ್ರರ ಗುಂಪು ಮಂಗಳವಾರ 10.30 ರ ಸುಮಾರಿಗೆ ಪೇಷಾವರದಲ್ಲಿನ ಸೈನಿಕ ಶಾಲೆಯನ್ನು ಪ್ರವೇಶಿಸಿ  ಮನ ಬಂದಂತೆ ಗುಂಡು ಹಾರಿಸಿ  ಮುಗ್ಧ ಮಕ್ಕಳ ರಕ್ತದೋಕುಳಿಯಾಡಿದ್ದಾರೆ.
 
ತಾಲಿಬಾನ್ ಉಗ್ರರ ಕೃತ್ಯಕ್ಕೆ ವಿಶ್ವದಾದ್ಯಂತ ಘಟನೆಗೆ ಖಂಡನೆ ವ್ಯಕ್ತವಾಗಿದೆ. 

ವೆಬ್ದುನಿಯಾವನ್ನು ಓದಿ