ಸುಷ್ಮಾ ಅವರಿಗೆ ಐಸಿಸ್ ಉಗ್ರ ಜತೆ ಹಾಟ್‌ಲೈನ್ ಸಂಪರ್ಕವಿದೆಯೇ?: ಕಾಂಗ್ರೆಸ್

ಶನಿವಾರ, 1 ಆಗಸ್ಟ್ 2015 (16:58 IST)
ಲಿಬಿಯಾದಲ್ಲಿ ಉಗ್ರರಿಂದ ಅಪಹರಣಗೊಂಡಿದ್ದ ನಾಲ್ವರು ಭಾರತೀಯರ ಪೈಕಿ ಇಬ್ಬರು ಬಿಡುಗಡೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಘೋಷಿಸಿದ ಮರುದಿನ ಕಾಂಗ್ರೆಸ್  ನಾಯಕ ಮನೋಜ್ ತಿವಾರಿ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.  ಭಾರತ ಲಿಬಿಯಾದಲ್ಲಿ ಉಗ್ರಗಾಮಿ ಸಂಘಟನೆಯ ಜತೆ ವ್ಯವಹಾರವನ್ನು ನಡೆಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. 

"ಇಬ್ಬರು ಭಾರತೀಯರು ಬಿಡುಗಡೆಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ಮತ್ತಿಬ್ಬರಿಗಾಗಿ ಪ್ರಾರ್ಥಿಸೋಣ. ಆದರೆ ಸಚಿವೆ ಅವರಿಬ್ಬರು ಬಿಡುಗಡೆಯಾದ ಕ್ರೆಡಿಟ್ ತಮಗೆ ಸಲ್ಲಬೇಕು ಎಂಬಂತೆ ವರ್ತಿಸುತ್ತಿದ್ದಾರೆ. ಭಾರತವೇನು ಐಸಿಸ್ ಉಗ್ರರ ಜತೆ ವ್ಯವಹಾರವನ್ನು ನಡೆಸುತ್ತಿದೆಯೇ", ಎಂದು ಅವರು ಕಿಚಾಯಿಸಿದ್ದಾರೆ. 
 
"ವಿದೇಶಾಂಗ ಸಚಿವೆ ಐಸಿಸ್ ಉಗ್ರರ ಜತೆ ನೇರ ಹಾಟ್‌ಲೈನ್ ಸಂಪರ್ಕದಲ್ಲಿದ್ದಾರಂತೆ. ಪಂಜಾಬ್‌ನ 57 ಜನರ ಕತೆ ಏನು. ಅವರು ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆ ಎನ್ನುವುದನ್ನು ಸಹ ಖಚಿತಪಡಿಸಿ ಸಚಿವರೇ", ಎಂದು ಅವರು ಸವಾಲು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ