ಸ್ವಚ್ಛ ಭಾರತ ಮುಖ್ಯಸ್ಥೆ ವಿಜಯಲಕ್ಷ್ಮೀ ಜೋಶಿ ರಾಜೀನಾಮೆ

ಗುರುವಾರ, 3 ಸೆಪ್ಟಂಬರ್ 2015 (09:24 IST)
ಸ್ವಚ್ಛ ಭಾರತ ಮುಖ್ಯಸ್ಥೆ ವಿಜಯಲಕ್ಷ್ಮೀ ಜೋಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರಧಾನಿ ಮೋದಿಯವರ ಮಹಾತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆ ಒಂದು ವರ್ಷಗಳನ್ನು ಪೂರೈಸುವ ಮೊದಲೇ ಅಭಿಯಾನದ ಮುಖ್ಯಸ್ಥೆ ರಾಜೀನಾಮೆ ನೀಡಿರುವುದು ಅಚ್ಚರಿಯನ್ನು ಮೂಡಿಸಿದೆ.
 
1980ರ ಬ್ಯಾಚ್‌ನ ಗುಜರಾತ್ ಕೆಡಾರ್‌ ಐಎಎಸ್ ಅಧಿಕಾರಿಯಾಗಿದ್ದ ಅವರು ತಮ್ಮ ರಾಜೀನಾಮೆಗೆ ನಿರ್ದಿಷ್ಟ ಕಾರಣ ನೀಡಿಲ್ಲ. ವೈಯಕ್ತಿಕ  ಕಾರಣಗಳನ್ನು ನೀಡಿ ವಿಆರ್‌ಎಸ್‌ಗಾಗಿ ಅವರು ಮನವಿ ಸಲ್ಲಿಸಿದ್ದರು. ಇನ್ನು 3 ವರ್ಷ ಅವರ ಸೇವಾವಧಿ ಬಾಕಿ ಇತ್ತು.
 
ಈಗ ಅವರ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದು ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. 
 
ಮಹಾತ್ಮಗಾಂಧಿ ಅವರ ಜನ್ಮದಿನದಂದು( 2014ರ ಅಕ್ಟೋಬರ್ 2) ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು ಜಾರಿಗೊಳಿಸಿದ್ದರು. ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲು 2 ಲಕ್ಷ ಕೋಟಿ ರೂ ವ್ಯಯಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.

ವೆಬ್ದುನಿಯಾವನ್ನು ಓದಿ