ಸ್ವಚ್ಛ ಭಾರತ: ಕಾಂಗ್ರೆಸ್‌ ಹೈಕಮಾಂಡ್‌ಗೆ ಸೆಡ್ಡು ಹೊಡೆದು ಪೊರಕೆ ಹಿಡಿಯಲಿರುವ ಶಶಿ ಥರೂರ್

ಶನಿವಾರ, 25 ಅಕ್ಟೋಬರ್ 2014 (12:53 IST)
ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಕಾರಣಕ್ಕೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರನ್ನು ಕಾಂಗ್ರೆಸ್ ವಕ್ತಾರನ ಸ್ಥಾನದಿಂದ ಪದಚ್ಯುತಗೊಳಿಸಿರಬಹುದು, ಆದರೆ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವ ಅವರ ದೃಢ ನಿರ್ಧಾರಕ್ಕೆ ಹೈಕಮಾಂಡ್‌ನ ಈ ಕ್ರಮ ಅಡ್ಡಿಯಾಗಿಲ್ಲ .

ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿಯವರಿಂದ ಆಹ್ವಾನ ಪಡೆದಿರುವ ಕಾಂಗ್ರೆಸ್ ನಾಯಕ ಶಶಿ ಥರೂರ್ ಶನಿವಾರ ತಿರುವನಂತಪುರಮ್ ಸಮುದ್ರತೀರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 
 
'ಅತಿಯಾದ ಕಸದಿಂದ ಕೂಡಿದ ಮತ್ತು ಗಲೀಜು ಎಂಬ ಕುಖ್ಯಾತಿ ಪಡೆದ ವಿಳಿಂಜಂ ಬೀಚ್‌ನ್ನು , ಅಕ್ಟೋಬರ್ 25, ಬೆಳಿಗ್ಗೆ 11 ಗಂಟೆಯಿಂದ ಸ್ಥಳೀಯ ನಿವಾಸಿಗಳ ಜತೆ ಸೇರಿ ಸ್ವಚ್ಛಗೊಳಿಸಲಿದ್ದೇನೆ' ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
 
ಕ್ಲೀನ್ ಇಂಡಿಯಾ ಮಿಷನ್ ಭಾಗವಾಗಿ ಜಾಗೃತಿಯನ್ನು ಕೈಗೊಳ್ಳಲು ಸಚಿನ್ ತೆಂಡೂಲ್ಕರ್, ಶಶಿ ತರೂರ್, ಅನಿಲ್ ಅಂಬಾನಿ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಒಂಬತ್ತು ಪ್ರಖ್ಯಾತ ವ್ಯಕ್ತಿಗಳನ್ನು ಪ್ರಧಾನಿ ಮೋದಿ ನಾಮನಿರ್ದೇಶನ ಮಾಡಿದ್ದರು.

ವೆಬ್ದುನಿಯಾವನ್ನು ಓದಿ