ಸ್ವಚ್ಛ ಭಾರತಕ್ಕಾಗಿ ವೃದ್ಧ ಮಾಡುತ್ತಿರುವುದೇನು ಗೊತ್ತಾ?

ಬುಧವಾರ, 16 ನವೆಂಬರ್ 2016 (17:56 IST)
ಧಾರವಾಡ: ಸ್ವಚ್ಛ ಭಾರತ.. ಪ್ರಧಾನಿ ಮೋದಿ ಅನುಷ್ಠಾನಕ್ಕೆ ತಂದ ಶುಚಿತ್ವ ಅಭಿಯಾನ ಯೋಜನೆ. ಇದೀಗ ಇದೇ ಯೋಜನೆಯ ಬಗ್ಗೆ ಅಪಾರ ಕಾಳಜಿ ವಹಿಸಿರುವ ವೃದ್ಧರೊಬ್ಬರು ಹೊಸ ದಾಖಲೆ ಮಾಡಲು ಹೊರಟಿದ್ದಾರೆ. 

 
ಹೌದು 71 ರ ಇಳಿವಯಸ್ಸಿನ ಉಮಾಪತಿ ಮೊದಲಿಯಾರ್ ಮೈಸೂರಿನಿಂದ ದೆಹಲಿವರೆಗೂ ಸೈಕಲ್ ಮೇಲೆ ತೆರಳಿ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.  
 
ಸದ್ಯ ಹುಬ್ಬಳ್ಳಿಗೆ ಬಂದಿರುವ ಉಮಾಪತಿ, ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅಮರಗಿರಿ ಮಾಲೆಕಲ್ಲು ಗ್ರಾಮದವರು. ದೇಶದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಕೇವಲ ಸ್ವಚ್ಛ ಭಾರತ ಅಭಿಯಾನ ಅಷ್ಟೆ ಅಲ್ಲ 2001 ರಿಂದ ಹೆಚ್ಐವಿ ಏಡ್ಸ್, ಪರಿಸರ ಸ್ವಚ್ಛತೆ, ಮದ್ಯಪಾನ, ಗೋಹತ್ಯೆ, ಹೆಚ್1ಎನ್1 ಕುರಿತು ಜಾಗೃತಿ ಮೂಡಿಸಿದ್ದಾರೆ. ಇದೀಗ ಸ್ವಚ್ಛ ಭಾರತ ಅಭಿಯಾನದಡಿ ಬಯಲು ಶೌಚಾಲಯ ಮುಕ್ತ - ರೋಗ ಮುಕ್ತ ದೇಶದ ಬಗ್ಗೆ ಜಾಗೃತಿ ಜಾಥಾಕ್ಕೆ ಮುಂದಾಗಿದ್ದಾರೆ.
 
ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಮೈಸೂರಿನಿಂದ ಆರಂಭಿಸಿರುವ ಜಾಥಾ ಮುಂಬೈ ಮೂಲಕ ದೆಹಲಿ ಸಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ