ಯಾಕೂಬ್‌ ಮೆಮೋನ್‌‌ನಂತಹ ಉಗ್ರನಿಗೆ ಕರುಣೆ ತೋರುವುದು ದೇಶದ್ರೋಹದಂತೆ: ವೆಂಕಯ್ಯ ನಾಯ್ಡು

ಸೋಮವಾರ, 3 ಆಗಸ್ಟ್ 2015 (18:49 IST)
1993ರ ಮುಂಬೈ ಸ್ಫೋಟದ ರೂವಾರಿ ಉಗ್ರ ಯಾಕೂಬ್ ಮೆಮೋನ್‌ಗೆ ಗಲ್ಲು ವಿಧಿಸಿರುವ ಬಗ್ಗೆ ಕೆಲ ವ್ಯಕ್ತಿಗಳು ರಾಜಕೀಯಗೊಳಿಸುವ ಹುನ್ನಾರ ನಡೆಸಿದ್ದಾರೆ. ಅಂತಹ ವ್ಯಕ್ತಿಗೆ ಕರುಣೆ ತೋರಿಸುವುದು ದೇಶದ್ರೋಹ ಬಗೆದಂತೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. 
 
ಕೆಲವರು ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸಲು ಬಯಸುತ್ತಾರೆ. ಗಲ್ಲು ಶಿಕ್ಷೆ ಮತ್ತು ಭಯೋತ್ಪಾದನೆ ಎರಡು ವಿಭಿನ್ನ ವಿಷಯಗಳಾಗಿದ್ದರಿಂದ ಜನತೆ ಅದರ ಬಗ್ಗೆ ಚರ್ಚಿಸಬಹುದು ಎಂದು ತಿಳಿಸಿದ್ದಾರೆ.
 
ದೇಶದಲ್ಲಿ ಕೆಲ ವ್ಯಕ್ತಿಗಳು ಭಯೋತ್ಪಾದಕರು, ಫ3ತ್ಯೇಕತಾವಾದಿಗಳು ಮತ್ತು ಭಯೋತ್ಪಾದನೆಯನ್ನು ಹೆಚ್ಚಿಸುವ ಸಿದ್ಧಾಂತ ಹೊಂದಿದ್ದಾರೆ ಎಂದು ಲೇವಡಿು ಮಾಡಿದ್ದಾರೆ.
 
ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಉಗ್ರರ ದಾಳಿಗಳಿಂದ ನಾವು ತುಂಬಾ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಉಗ್ರರು ಆರ್ಥಿಕತೆ ಮತ್ತು ದೇಶವನನ್ನು ದುರ್ಬಲಗೊಳಿಸುವ ಗುರಿ ಹೊಂದಿದ್ದಾರೆ. ಉಗ್ರರಿಗೆ ಯಾವುದೇ ರೀತಿಯ ಕರುಣೆ ತೋರುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ