ತಾಜ್‌ಮಹಲ್ ಹಿಂದೂ ದೇವಾಲಯವಲ್ಲ: ಕೇಂದ್ರ ಸಚಿವ ಮಹೇಶ್ ಶರ್ಮಾ

ಮಂಗಳವಾರ, 1 ಡಿಸೆಂಬರ್ 2015 (15:26 IST)
ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್‌ಮಹಲ್ ಹಿಂದು ದೇವಾಲಯವಾಗಿತ್ತು ಎನ್ನುವ ಬಗ್ಗೆ ಸರಕಾರಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಕೇಂದ್ರ ಸಂಸ್ಕ್ರತಿ ಖಾತೆ ಸಚಿವ ಮಹೇಶ್ ಶರ್ಮಾ ಲೋಕಸಭೆಗೆ ತಿಳಿಸಿದ್ದಾರೆ.
 
ಸುಪ್ರೀಂಕೋರ್ಟ್‌ನಲ್ಲಿ ಕೆಲವರು ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿದ್ದು ತಾಜ್‌ಮಹಲ್ ಮೂಲತಃ ಶಿವ ದೇವಾಲಯವಾಗಿತ್ತು. ಆದ್ದರಿಂದ ತಾಜ್‌ಮಹಲ್ ಮಾಲೀಕತ್ವವನ್ನು ಹಿಂದುಗಳಿಗೆ ವರ್ಗಾಯಿಸಿ ಮುಸ್ಲಿಮರು ಪ್ರಾರ್ಥನೆ ಮಾಡದಂತೆ ನಿಷೇಧ ಹೇರಬೇಕು  ಎನ್ನುವ ವಾದ ಮಂಡಿಸಲಾಗಿತ್ತು.
 
ಮಾಧ್ಯಮದ ವರದಿಗಳ ಪ್ರಕಾರ, ನ್ಯಾಯಾಲಯದಲ್ಲಿ ತಾಜ್‌ಮಹಲ್ ಕುರಿತಂತೆ ದೂರು ದಾಖಲಾಗಿರುವ ಬಗ್ಗೆ ಸರಕಾರಕ್ಕೆ ಮಾಹಿತಿಯಿದೆ ಎಂದು ಸಚಿವ ಶರ್ಮಾ ತಿಳಿಸಿದ್ದಾರೆ.
 
ಇದಕ್ಕಿಂತ ಮೊದಲು, 17ನೇ ಶತಮಾನದ ತಾಜ್‌ಮಹಲ್ ಶಿವಾ ದೇವಾಲಯವಾಗಿತ್ತು ಎನ್ನುವ ವಾದಗಳನ್ನು ಭಾರತದ ಪ್ರಾಚ್ಯಶಾಸ್ತ್ರ ವಿಭಾಗ ತಳ್ಳಿಹಾಕಿದೆ.

ವೆಬ್ದುನಿಯಾವನ್ನು ಓದಿ