ಐದು ದಿನಗಳವರೆಗೆ ಬ್ಯಾಂಕ್ ಬಂದ್: ಗ್ರಾಹಕರೆ,ಎಟಿಎಂನಲ್ಲಿ ಹಣ ಖಾಲಿಯಾಗುವ ಮುನ್ನ ಡ್ರಾ ಮಾಡಿ

ಸೋಮವಾರ, 19 ಅಕ್ಟೋಬರ್ 2015 (20:45 IST)
ಬ್ಯಾಂಕಿಂಗ್ ಕ್ಷೇತ್ರಕ್ಕೆ ಇದೀಗ ಸುಧೀರ್ಘ ರಜೆಯ ಸಂಭ್ರಮ. ಪ್ರಸಕ್ತ ವಾರದಲ್ಲಿ ಸಾಲು ಸಾಲು ರಜೆಗಳ ಸುರಿಮಳೆಯಾಗಲಿದೆ.
 
ಅಕ್ಟೋಬರ್ 21 ರಿಂದ 25 ರವರೆಗೆ ಬ್ಯಾಂಕ್‌ಗಳಿಗೆ ರಜೆ. ಅಕ್ಟೋಬರ್ 21 ರಂದು ದುರ್ಗಾ ಪೂಜೆ, ಅ.22 ರಂದು ದಸರಾ ಹಬ್ಬ, ಅ.23 ರಂದು ಮೊಹರಂ,ಅ.24 ರಂದು ನಾಲ್ಕನೇ ಶನಿವಾರ, ಅ.25 ರಂದು ರವಿವಾರದ ರಜೆ. 
 
ಬ್ಯಾಂಕ್‌ಗಳ ಧೀರ್ಘ ರಜೆಯಿಂದಾಗಿ ವಹಿವಾಟಿನ ಹಣಕಾಸು ವರ್ಗಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಎಟಿಎಂನಲ್ಲಿರುವ ಹಣ ಖಾಲಿಯಾಗುವ ಸಾಧ್ಯತೆಗಳಿಂದಾಗಿ, ಕಾರ್ಡ್ ಬಳಕೆದಾರರು ತೊಂದರೆ ಅನುಭವಿಸುವ ಸಾಧ್ಯತೆಗಳಿವೆ. ಆದ್ದರಿಂದ, ಗ್ರಾಹಕರೇ ಕೂಡಲೇ ಎಟಿಎಂನಲ್ಲಿರುವ ನಿಮ್ಮ ಹಣವನ್ನು ಡ್ರಾ ಮಾಡಿ ಸೇಫಾಗಿರಿ. 
 
ದೇಶದ ಎಲ್ಲಾ ಬ್ಯಾಂಕ್‌ಗಳು ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆಯನ್ನು ಖಾಸಗಿ ಕಂಪೆನಿಗಳಿಗೆ ನೀಡಿದ ಹಿನ್ನೆಲೆಯಲ್ಲಿ, ದೀರ್ಘ ರಜೆಯಿಂದಾಗಿ ಹಣ ತುಂಬುವ ಕಾರ್ಯಕ್ಕೂ ಅಡ್ಡಿಯಾಗುವ ಸಾಧ್ಯತೆಗಳಿವೆ. 
 
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಹಬ್ಬದ ಸೀಜನ್‌ನಿಂದಾಗಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳಿರುವುದರಿಂದ ಎಟಿಎಂನಲ್ಲಿ ಹೆಚ್ಚಿನ ಹಣವನ್ನು ತುಂಬುವತ್ತ ಬ್ಯಾಂಕ್‌ಗಳು ಗಮನಹರಿಸಿವೆ ಎಂದು ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ